ಕರಾವಳಿ

ಆಪರೇಶನ್‌ ಬೋರ್’ವೆಲ್ ಯಶಸ್ವಿ: ಸಾವನ್ನು ಗೆದ್ದು ಬಂದ ರೋಹಿತ್ ಖಾರ್ವಿ

Pinterest LinkedIn Tumblr

ಕುಂದಾಪುರ: ಮರವಂತೆ ಹೊರ ಬಂದರು‌ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಬೋರ್ ವೆಲ್ ರಿಪೇರಿ ವೇಳೆ ಮಣ್ಣು ಕುಸಿತದಿಂದ ಮಣ್ಣಿನೊಳಕ್ಕೆ ಸಿಲುಕಿದ್ದ ರೋಹಿತ್ ಖಾರ್ವಿ (32) ಅವರನ್ನು ಸತತ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿದೆ.

15 ಅಡಿ ಭೂಮಿಯೊಳಗೆ ಕುಸಿದು‌ ಬಿದ್ದಿದ್ದ ರೋಹಿತ್ ಖಾರ್ವಿ ತಲೆ ಭಾಗ ಮಾತ್ರ ಮೇಲಿದ್ದು ಐದಾರು ಗಂಟೆಗಳ ಕಾಲ ಹಾಗೆಯೇ ಇತ್ತು. ನಿರಂತರ ಕಾರ್ಯಾಚರಣೆ ಬಳಿಕ ರೋಹಿತ್ ಮೇಲಕ್ಕೆತ್ತಿದ್ದು ಸಾವನ್ನು ಗೆದ್ದು ಬಂದ ರೋಹಿತ್ ಅವರನ್ನು ಸದ್ಯ ಚಿಕಿತ್ಸೆ ಹಿನ್ನಲೆ ‌ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಧಿಕಾರಿಗಳ ಕಾರ್ಯಕ್ಕೆ ಜನರ ಶಹಬ್ಬಾಸ್!
ಘಟನೆ ಸಂಭವಿಸುತ್ತಲೇ ಸ್ಥಳೀಯರು ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ತಕ್ಷಣ ಸ್ಥಳಕ್ಕೆ ಕುಂದಾಪುರ ಎಸಿ ಕೆ. ರಾಜು ಭೇಟಿ ನೀಡಿದ್ದು ಅಗ್ನಿಶಾಮಕ ಹಾಗೂ ಪೊಲೀಸರು ಆಗಮಿಸುತ್ತಲೇ ಈ ಆಪರೇಶನ್ ಆರಂಭವಾಗುತ್ತದೆ.ಕುಂದಾಪುರ ಅಗ್ನಿಶಾಮಕ, ಗಂಗೊಳ್ಳಿ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದ್ದು ಈ ಕಾರ್ಯಾಚರಣೆಗೆ ಸ್ಥಳೀಯರು ಮತ್ತು ಮೀನುಗಾರರು ಸಹಕರಿಸಿದರು.

ಘಟನಾ ಸ್ಥಳದಲ್ಲಿ ಅಪರ ಜಿಲ್ಲಾಧಿಕಾರಿ‌ ಸದಾಶಿವ ಪ್ರಭು, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಅಗ್ನಿಶಾಮಕದಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.