ಕರಾವಳಿ

ಬೋರ್ ವೆಲ್ ರಿಪೇರಿ ವೇಳೆ ಮಣ್ಣು ಕುಸಿತ- ಮಣ್ಣಿನೊಳಗೆ ಸಿಲುಕಿದ ಯುವಕನ ರಕ್ಷಣಾ ಕಾರ್ಯಾಚರಣೆ

Pinterest LinkedIn Tumblr

ಕುಂದಾಪುರ: ಬೋರ್ ವೆಲ್ ರಿಪೇರಿ ಸಂದರ್ಭ ಮಣ್ಣು‌ಕುಸಿದ ಪರಿಣಾಮ‌ ಯುವಕನೊಬ್ಬ ಮಣ್ಣಿನೊಳಕ್ಕೆ ಸಿಲುಕಿದ್ದು ಮೂರ್ನಾಲ್ಕು ಗಂಟೆಯಿಂದ ಯುವಕನ‌ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ಮರವಂತೆ‌ ಹೊರ ಬಂದರು ಪ್ರದೇಶದಲ್ಲಿ ನಡೆಯುತ್ತಿದ್ದ ಬೋರ್ ವೆಲ್ ಕಾಮಗಾರಿ ಇದಾಗಿದ್ದು ಆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಉಪ್ಪುಂದ ನಿವಾಸಿ ರೋಹಿತ್ ಸದ್ಯ ಮಣ್ಣಿನೊಳಕ್ಕೆ ಸಿಲುಕಿದ್ದಾರೆ. ಭೂಮಿ ಮಟ್ಟದಿಂದ ಸುಮಾರು 15 ಅಡಿ ಆಳದಲ್ಲಿರುವ ರೋಹಿತ್ ಮೇಲಕ್ಕೆತ್ತುವ ಕಾರ್ಯಾಚರಣೆಯನ್ನು ಕುಂದಾಪುರ ಅಗ್ನಿಶಾಮಕ, ಗಂಗೊಳ್ಳಿ ಪೊಲೀಸರು ನಡೆಸುತ್ತಿದ್ದಾರೆ.ರೋಹಿತ್ ಖಾರ್ವಿ ಮೇಲೆತ್ತಲು ಯತ್ನಿಸುತ್ತಿರುವ ಅಗ್ನಿಶಾಮಕ‌ ಸಿಬ್ಬಂದಿಗಳ ಜೊತೆ ಮಾತನಾಡುತ್ತಿರುವ ರೋಹಿತ್ ಮಣ್ಣಿನೊಳಕ್ಕೆ ಸಿಲುಕಿದ್ದು ತಲೆ ಭಾಗ ಮಾತ್ರವೇ ಮಣ್ಣಿನಿಂದ ಮೇಲಕ್ಕಿದೆ. ನಾಜೂಕಾಗಿ ಕಾರ್ಯಾಚರಣೆ ನಡೆಯಬೇಕಿದ್ದು ಸಮೀಪದಿಂದ ಮಣ್ಣು ಬಿಡಿಸಿ ಒಳಗಿಳಿಯುವ ಪ್ರಯತ್ನದಲ್ಲಿ ಕಾರ್ಯಾಚರಣೆ ತಂಡವಿದೆ. ಜೆಸಿಬಿ ಮೂಲಕ ಮಣ್ಣು ತೆಗೆಯುವ ಕಾರ್ಯವಾಗುತ್ತಿದೆ.

ರೋಹಿತ್ ಅವರನ್ನು ಮೇಲಕ್ಕೆತ್ತಿದ ಬಳಿಕ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆ ಸ್ಥಳದಲ್ಲಿ ವೈದ್ಯರು, ಅಂಬುಲೆನ್ಸ್ ನಿಯೋಜನೆ ಮಾಡಲಾಗಿದೆ.

Comments are closed.