ಕರಾವಳಿ

ವಿಶ್ವಕರ್ಮ ಯೂನಿವರ್ಸಿಟಿಗೆ ಜಮೀನು ಮತ್ತು ವಿಶೇಷ ಅನುಧಾನ ಮಂಜೂರು ಮಾಡುವಂತೆ ಸಂಸದರಿಗೆ ಮನವಿ

Pinterest LinkedIn Tumblr

ಮಂಗಳೂರು, ಫೆಬ್ರವರಿ.16 : ವಿಶ್ವಕರ್ಮ ಯೂನಿವರ್ಸಿಟಿಗೆ ಸರಕಾರಕ್ಕೆ ಜಮೀನು ಮತ್ತು ವಿಶೇಷ ಅನುಧಾನವನ್ನು ಸರಕಾರವು ಮಂಜೂರು ಮಾಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ಮಂಗಳೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೇಶವ ಆಚಾರ್ಯ ರವರ ನೇತೃತ್ವದಲ್ಲಿ ರವಿವಾರ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮನವಿ ನೀಡಲಾಯಿತು.

ಈ ಸಂಧರ್ಭದಲ್ಲಿ ಕ್ಷೇತ್ರದ 2ನೇ ಮೊಕ್ತೇಸರರಾದ ಸುಂದರ್ ಆಚಾರ್ಯ ಬೆಳುವಾಯಿ, 3ನೇ ಮೊಕ್ತೇಸರರಾದ ಲೋಕೇಶ್ ಆಚಾರ್ಯ ಬಿಜೈ, ಕ್ಷೇತ್ರದ ಮಾಜಿ ಮೊಕ್ತೇಸರರಾದ ಮುನಿಯಲ್ ದಾಮೋದರ ಆಚಾರ್ಯ, ಕಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರು, ಬಿಜೆಪಿಯ ಕಾರ್ಯಕರ್ತರು, ವಿಶ್ವಕರ್ಮ ಸಮಾಜದ ವಿವಿಧ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆನೆಗುಂದಿ ಮಹಾಸಂಸ್ಥಾನದವತಿಯಿಂದ ಆನೆಗುಂದಿ ಶ್ರೀ ಸರಸ್ವತಿ ಎಜುಕೇಷನಲ್ (ಅಸೆಟ್) ಎನ್ನುವ ಶೈಕ್ಷಣಿಕ ಟ್ರಸ್ಟನ್ನು ನೋಂದಾವಣಿ ಮಾಡಲಾಗಿದ್ದು ವಿಶ್ವಕರ್ಮ ಯೂನಿವರ್ಸಿಟಿಯನ್ನು ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸುವ ಯೋಜನೆ ಇದ್ದು ಪಂಚ ಶಿಲ್ಪಗಳಾದ ಲೋಹ, ಕಾಷ್ಠ, ಕಂಚು, ಶಿಲಾ ಮತ್ತು ಸ್ವರ್ಣ ಶಿಲ್ಪಾ ಶಾಸ್ತ್ರ ಎಂಬ ವಿಶ್ವಕರ್ಮ ಸಮಾಜದ ವೃತ್ತಿಗಳ ಅಧ್ಯಯನ, ಸಂಶೋಧನೆ, ನಾವೀನ್ಯತೆಯನ್ನು ಹೊಸ ತಲೆಮಾರಿಗೆ ಪರಿಚಯಿಸುಯ ಮಹತ್ತರ ಉದ್ದೇಶವು ವಿಶ್ವಕರ್ಮ ಯೂನಿವರ್ಸಿಟಿಯಾಗಿರುತ್ತದೆ.

ಪಂಚ ಶಿಲ್ಪ ಕುಲಕಸುಬು ಮತ್ತು ಆಧುನಿಕ ಇಂಜಿನೀರಿಂಗ್ ತಂತ್ರಜ್ಞಾನ ಸಮನ್ವಯದ ದೇಸಿ ಶಿಕ್ಷಣ ವ್ಯವಸ್ಥೆಯನ್ನು ವಿಶ್ವದೆಲ್ಲೆಡೆ ವ್ಯಾಪಿಸುವ ಉದ್ದೇಶವನ್ನೂ ಯೂನಿವರ್ಸಿಟಿ ಹೊಂದಿದೆ ಇಂಜಿನಿರಿಂಗ್ ಮತ್ತು ಪಂಚಶಿಲ್ಪಗಳ ಪ್ರಾಧ್ಯಾಪಕರು ಜಂಟಿಯಾಗಿ ಬೋಧಿಸುವ ಮತ್ತು ಸಾಮಾನ್ಯ ಶಿಕ್ಷಣದ ಜತೆ ಪಂಚಶಿಲ್ಪಗಳ ಶಿಕ್ಷಣ ಕಲಿಸುವ ಹೊಸ ವೃತ್ತಿಯಾಧಾರಿತ ಮತ್ತು ಕೌಶಲ್ಯಾಭಿವೃದ್ಧಿ ಶಿಕ್ಷಣದ ಅಭ್ಯಾಸ ಪ್ರಸ್ತುತ ವಿಶ್ವಕರ್ಮ ಯೂನಿವರ್ಸಿಟಿ ಇದರ ಮೂಲ ಉದ್ದೇಶದಲ್ಲೊಂದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Comments are closed.