ಉಡುಪಿ: ಅಪಘಾತದ ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಸ್ಪಂದನೆ ನೀಡಿ ಆರೋಗ್ಯ ಸಚಿವ ಶ್ರೀರಾಮುಲು ಮಾನವೀಯತೆ ಮೆರೆದ ಘಟನೆ ಶನಿವಾರ ಕುಂಭಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕುಂದಾಪುರಕ್ಕೆ ಆಗಮಿಸುತ್ತಿದ್ದ ಆರೋಗ್ಯ ಸಚಿವ ಶ್ರೀ ರಾಮುಲು ಎದುರೇ ರಿಕ್ಷಾ ಅಪಘಾತ ನಡೆದಿದ್ದು ಗಾಯಾಳು ಮಹಿಳೆ ನೋವಿನಿಂದ ಕಿರುಚಿತ್ತಿದ್ದರು. ಕೂಡಲೇ ಕಾರಿನಿಂದ ಇಳಿದ ಸಚಿವರು ಗಾಯಾಳು ಮಹಿಳೆಯನ್ನು ಎತ್ತಿ ಆಸ್ಪತ್ರೆಗೆ ಸಾಗಿಸಲು ಸಹಕಾರ ಮಾಡಿದರು.
ಬಳಿಕ ಉಡುಪಿ ಶಾಸಕ ರಘುಪತಿ ಭಟ್ ಕಾರಿನಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಗಾಯಾಳು ಮಹಿಳೆ ಆಸ್ಪತ್ರೆ ಸಾಗಿಸಲು ಸಚಿವರಿಗೆ ಅವರ ಆಪ್ತರು ಸಾತ್ ನೀಡಿದರು.
ಸಚಿವರ ಮಾನವೀಯ ಸ್ಪಂದನೆಗೆ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.