ಕರಾವಳಿ

“34ನೇ ಆರ್‍ಪಿಎಫ್ ರೈಸಿಂಗ್” ದಿನಾಚರಣೆ ಪ್ರಯುಕ್ತ “ರಕ್ತದಾನ ಶಿಬಿರ”

Pinterest LinkedIn Tumblr

ಮಂಗಳೂರು, ಸೆಪ್ಟೆಂಬರ್ 28: “34ನೇ ಆರ್‍ಪಿಎಫ್ ರೈಸಿಂಗ್” ದಿನಾಚರಣೆಯ ಅಂಗವಾಗಿ ಇನ್ಸ್‍ಪೆಕ್ಟರ್ ರೈಲ್ವೆ ಸಂರಕ್ಷಣಾ ಪಡೆ, ಮಂಗಳೂರು ಜೆ.ಎನ್. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹಯೋಗದೊಂದಿಗೆ “ರಕ್ತದಾನ ಶಿಬಿರ” ವನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.

ಆರ್‍ಪಿಎಫ್ ರಕ್ಷಣಾ ಪಡೆಯ ಸದಸ್ಯರು ರಕ್ತದಾನ ಮಾಡಿದರು, ನಂತರ ಮಂಗಳೂರು ರೈಲ್ವೇ ಸ್ಟೇಷನ್ ಜಂಕ್ಷನ್‍ನಲ್ಲಿ ಕೇಂದ್ರ ಸರ್ಕಾರದಿಂದ ಆಯೋಜಿತವಾದ ಸ್ವಚ್ಛ ಭಾರತ ಕಾರ್ಯಕ್ರಮದಡಿಯಲ್ಲಿ “ಸ್ವಚ್ಚಾ ಹೀ ಸೇವಾ 2019” ಕಾರ್ಯಕ್ರಮದಡಿಯಲ್ಲಿ ಸ್ವಚ್ತ ಹೈ ಸೇವಾ ಪ್ರತಿಜ್ಞೆಯನ್ನು ತೆಗೆದುಕೊಂಡರು. ರೈಲ್ವೆ ಸಿಬ್ಬಂದಿ, ಅಧಿಕೃತ ಮಾರಾಟಗಾರರು, ಸ್ಟಾಲ್ ಕೀಪರ್‍ಗಳು, ಆಟೋ-ಟ್ಯಾಕ್ಸಿ ವಾಹನ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಂಗಳೂರು ರೈಲ್ವೇ ಸ್ಟೇಷನ್ ಜಂಕ್ಷನ್ ಆವರಣದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಇದೇ ಸಂಧರ್ಭದಲ್ಲಿ ಪ್ರಯಾಣಿಕರಿಂದ ಪ್ಲಾಸ್ಟಿಕ್ ಚೀಲವನ್ನು ಸಂಗ್ರಹಿಸಿ ಅವರಿಗೆ ಬಟ್ಟೆ ಚೀಲವನ್ನು ಒದಗಿಸಿದರು. ಅಪರಿಚಿತರಿಂದ ತಿಂಡಿ ತಿನಿಸುಗಳನ್ನು ತೆಗೆದುಕೊಳ್ಳಬೇಡಿ ಮತ್ತು ಹೆಚ್ಚು ಬೆಲೆಬಾಳುವ ಚಿನ್ನಾಭರಣದ ವಸ್ತುಗಳ ಮೇಲೆ ಜಾಗರೂಕತೆ ವಹಿಸಬೇಕು ಎಂದು ಪ್ರಯಾಣಿಕರಿಗೆ ಮಾಹಿತಿ ನೀಡಲಾಯಿತು.

ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಫುಟ್ ಬೋರ್ಡ್ ಪ್ರಯಾಣವನ್ನು ತಪ್ಪಿಸಲು, ರೈಲುಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುವುದು ಕಂಡುಬಂದಲ್ಲಿ ವರದಿ ಮಾಡಿ ಯಾವುದೇ ಪೊಲೀಸ್ ಏಜೆನ್ಸಿಗಳಿಗೆ ಅಥವಾ ಆರ್ ಪಿ ಎಫ್ ನ ಟೋಲ್ ಫ್ರೀ ಸೆಕ್ಯೂರಿಟಿ ಸಹಾಯವಾಣಿ ಸಂಖ್ಯೆ -182 ರ ಮೂಲಕ ಅನುಮಾನಾಸ್ಪದ / ಕೈಬಿಟ್ಟ ವಸ್ತುವಿನ ಬಗ್ಗೆ ತಕ್ಷಣ ಮಾಹಿತಿಯನ್ನು ನೀಡಿ ಹಾಗೂ ರೈಲ್ವೇ ಆವರಣ ಮತ್ತು ರೈಲುಗಳಲ್ಲಿ ಕಸ ಹಾಕಬಾರದು ಮತ್ತು “ಸ್ವಚ್ಛ ರೈಲ್ವೇ” ಮಾಡಲು ಪ್ರಯಾಣಿಕರಿಗೆ ಆರ್‍ಪಿಎಫ್ ಮತ್ತು ರೈಲ್ವೆ ಸಿಬ್ಬಂದಿ ಸಹಾಯ ಹಸ್ತ ನೀಡುವಂತೆ ಪ್ರಯಾಣಿಕರಿಗೆ ವಿನಂತಿಸಿದರು.

Comments are closed.