ಕರಾವಳಿ

ಮನೆಯಲ್ಲಿ ತರಕಾರಿ, ಹಣ್ಣುಗಳು ಕೆಡದಂತೆ ರಕ್ಷಿಸಲು ಕೆಲವೊಂದು ಟಿಪ್ಸ್‌ಗಳು

Pinterest LinkedIn Tumblr

ಹಣ್ಣು ಮತ್ತು ತರಕಾರಿಯನ್ನ ಕತ್ತರಿಸಿ ಇಟ್ಟ ಸ್ವಲ್ಪ ಸಮಯದಲ್ಲೇ ಹಾಳಾಗುತ್ತದೆ. ಇಂತಹ ಸಂದರ್ಭದಲ್ಲಿ ಇವುಗಳನ್ನು ಕೆಡದಂತೆ ರಕ್ಷಿಸಲು ಕೆಲವೊಂದು ವಿಧಾನಗಳನ್ನು ಪಾಲಿಸಬೇಕು. ಅವುಗಳನ್ನು ಪಾಲಿಸಿದರೆ ತುಂಬಾ ಸಮಯದವರೆಗೆ ಹಣ್ಣುಗಳು ಫ್ರೆಶ್ ಆಗಿರುತ್ತದೆ.

ನಿಂಬೆ ರಸ : ಹಣ್ಣುಗಳನ್ನು ಬೇರೆ ಬೇರೆಯಾಗಿ ಕತ್ತರಿಸಿ, ಬೇರೆ ಬೌಲ್‌ಗಳಲ್ಲಿ ಹಾಕಿ ನಂತರ ನಿಂಬೆ ರಸವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಹಣ್ಣಗಳ ಮೇಲೆ ಸಿಂಪಡಿಸಿದರೆ ಹಣ್ಣುಗಳು ಆರು ಗಂಟೆಗಳವರೆಗೆ ಕೆಡದೆ ಹಾಗೇ ಉಳಿಯುತ್ತದೆ.

ಪ್ಲಾಸ್ಟಿಕ್‌ ಕವರ್‌ : ಹಣ್ಣುಗಳನ್ನು ಕತ್ತರಿಸಿ ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ, ನಂತರ ಪ್ಲಾಸ್ಟಿಕ್‌ ಕವರ್‌ ಮೇಲೆ ಸಣ್ಣ ರಂಧ್ರಗಳನ್ನು ಮಾಡಿ. ಹೀಗೆ ಮಾಡುವುದರಿಂದ 3-4 ಗಂಟೆಗಳವರೆಗೆ ಹಣ್ಣು ಹಾಗೇ ಉಳಿಯುತ್ತದೆ.

ಸಿಟ್ರಿಕ್‌ ಆಯಸಿಡ್ : ಲೆಮೆನ್‌ ಜ್ಯೂಸ್‌ ಬದಲಾಗಿ ಸಿಟ್ರಿಕ್‌ ಆಯಸಿಡ್‌ನ ಪುಡಿಯನ್ನುಬಳಕೆ ಮಾಡುವುದರಿಂದ ಹಣ್ಣುಗಳನ್ನು ಇನ್ನು ಹೆಚ್ಚು ಕಾಲ ಫ್ರೆಶ್‌ ಆಗಿರುವಂತೆ ನೋಡಿಕೊಳ್ಳಬಹುದು. ಇದನ್ನು ಬಳಕೆ ಮಾಡುವುದರಿಂದ 10 ರಿಂದ 12 ಗಂಟೆಗಳ ಕಾಲ ಹಣ್ಣುಗಳನ್ನು ಕೆಡದಂತೆ ಇಡಬಹುದು.

ಕೋಲ್ಡ್‌ ವಾಟರ್‌ : ಹಣ್ಣುಗಳನ್ನು ಕೋಲ್ಡ್‌ ವಾಟರ್‌ನಲ್ಲಿ ಹಾಕಿ ರಕ್ಷಿಸುವುದರಿಂದ 3 ರಿಂದ 4 ಗಂಟೆಗವರೆಗೆ ಇದು ಕೆಡದೇ ಇರುತ್ತದೆ. ಐಸ್ ಹಣ್ಣುಗಳನ್ನು ಕೆಡದಂತೆ ಇಡಲು ಹಾಗೂ ಫ್ರೆಶ್ ಆಗಿರುವಂತೆ ನೋಡಿಕೊಳ್ಳಲು ಸಹಾಯಕವಾಗಿದೆ.

Comments are closed.