ಕರಾವಳಿ

ಮದುವೆಯಾಗಿ 2 ತಿಂಗಳಿಗೆ ಬೇಡವಾದಳು ಪತ್ನಿ: ತ್ರಿವಳಿ ತಲಾಖ್ ಹೇಳಿದ ಪತಿ ಜೈಲು ಪಾಲು! (Video)

Pinterest LinkedIn Tumblr

ಕುಂದಾಪುರ: ಮದುವೆಯಾದ ಎರಡು ತಿಂಗಳಿಗೆ ಪತ್ನಿಯು ಬೇಡ ಎಂದ ಭೂಪನೋರ್ವ ಮೂರು ಬಾರಿ ತಲಖ್ ಹೇಲಿ ಇದೀಗಾ ಜೈಲು ಕಂಬಿ ಎಣಿಸುವಂತಾಗಿದೆ. ಕುಂದಾಪುರ ತಾಲೂಕಿನ ಮೂಡುಗೋಪಾಡಿಯ ಸಂತ್ರಸ್ತ ಮಹಿಳೆ ಕುಂದಾಪುರ ಠಾಣೆಗೆ ತ್ರಿವಳಿ ತಲಾಖ್ ವಿಚಾರದಲ್ಲಿ ನೀಡಿದ ದೂರಿನ ಹಿನ್ನೆಲೆ ಆರೋಪಿ ಪತಿಯನ್ನು ಪೊಲಿಸರು ಬಂಧಿಸಿದ್ದಾರೆ.

ಸಂತ್ರಸ್ತೆಯಾದ ಮೂಡುಗೋಪಾಡಿಯ ನಿವಾಸಿ ಅಲ್ಫಿಯಾ ಅಖ್ತರ್ (29) ಎನ್ನುವಾಕೆ ಭಾನುವಾರ ಸಂಜೆ ತನಗಾದ ಅನ್ಯಾಯದ ವಿರುದ್ಧ ತನ್ನ ಪತಿ ಹಾಗೂ ಆತನ ಕುಟುಂಬಿಕರ ವಿರುದ್ದ ದೂರು ನೀಡಿದ್ದು ಹಿರಿಯಡ್ಕ ನಿವಾಸಿಗಳಾದ ಸಂತ್ರಸ್ತೆ ಪತಿ ಹನೀಫ್ ಸಯ್ಯದ್(32) ಎಂಬಾತನನ್ನು ಪೊಲಿಸರು ಬಂಧಿಸಿದ್ದಾರೆ. ಮಾವ ಅಬ್ಬಾಸ್ ಸಯ್ಯದ್, ಅತ್ತೆ ಜೈತುನ್ ಹಾಗೂ ಪತಿಯ ಅಕ್ಕ ಆಯೇಷಾ ವಿರುದ್ಧವೂ ಸಂತ್ರಸ್ತೆ ದೂರು ನೀಡಿದ್ದಾರೆ.

(ಹನೀಫ್ ಸಯ್ಯದ್)

ರಾಜ್ಯದಲ್ಲೇ ಎರಡನೇ ಪ್ರಕರಣ!
ಉಡುಪಿ ಜಿಲ್ಲೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಪ್ರಕರಣಕ್ಕೆ ಕುಂದಾಪುರ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ಅಲ್ಲದೆ ರಾಜ್ಯದ ಮಟ್ಟಿಗೆ ತ್ರಿವಳಿ ತಲಾಖ್ ವಿಚಾರದಲ್ಲಿ ದೂರು ದಾಖಲಾದ ಎರಡನೇ ಪ್ರಕರಣ ಇದಾಗಿದೆ.

ಸಂತ್ರಸ್ತ ಮಹಿಳೆ ಹೇಳೋದೇನು?
ಹನೀಫ್ ಜತೆ ಈ ವರ್ಷದ ಜು. 4ಕ್ಕೆ ಮೂಡುಗೋಪಾಡಿಯಲ್ಲಿ ಮದುವೆಯಾಗಿತ್ತು. ಮದುವೆ ಬಳಿಕ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡಿದ್ದರು. ಆದರು ಕಷ್ಟಪಟ್ಟು ಸಹಿಸಿಕೊಂಡಿದ್ದೆ. ವರದಕ್ಷಿಣೆ ವಿಚಾರದಲ್ಲಿ ಚಿತ್ರಹಿಂಸೆ ನೀಡುತ್ತಿದ್ದರು. ಆಗ 5ಲಕ್ಷರೂ ಕೇಳಿದ್ದರೂ, 2ಲಕ್ಷ ರೂ. ವರದಕ್ಷಿಣೆ ನೀಡಲಾಗಿತ್ತು. ಇದೇ ಕಾರಣ ನೀಡಿ ನಿತ್ಯ ಕಿರುಕುಳ ಪತಿ ಹಾಗೂ ಮನೆಯವರು ಕಿರುಕುಳ ನೀಡುತ್ತಿದ್ದರು. ಆ. 15ರಂದು ಪತಿ ತನಗೆ ನಿಷೇಧಿತ ತ್ರಿವಳಿ ತಲಾಖ್ ನೀಡಿದ್ದಲ್ಲದೇ ಮನೆಯಿಂದ ಹೊರಹಾಕಿದ್ದರು. ತರುವಾಯ ವಕೀಲರ ಮೂಲಕ ‘ವೈವಾಹಿಕ ಜೀವನ ಮುಕ್ತವಾಗಿದೆ’ ಎಂದು ನೋಟಿಸ್ ಕಳುಹಿಸಿದ್ದರು. ಪತಿ ಮಾಡಿದ ಅನ್ಯಾಯದ ವಿರುದ್ಧ ನೊಂದ ಮಹಿಳೆ ಅಲ್ಫಿಯಾ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದು ತನಗಾದ ಅನ್ಯಾಯ ಯಾವೊಬ್ಬ ಮುಸ್ಲೀಂ ಮಹಿಳೆಯರಿಗೂ ಆಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರೋಪಿಯ ಬಂಧಿಸಿದ ಪೊಲಿಸರು..
ಭಾನುವಾರ ರಾತ್ರಿ ವೇಳೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ತ್ರಿವಳಿ ತಲಾಖ್ ಪ್ರಕರಣ ದಾಖಲಾಗುತ್ತದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್ ಹಾಗೂ ಸಿಬ್ಬಂದಿಗಳು ಆರೋಪಿ ಪತ್ತೆಗೆ ಬಲೆಬೀಸುತ್ತಾರೆ. ಆರೋಪಿ ಪರಾರಿಯಾಗಲು ಯಾವುದೇ ಅವಕಾಶ ನೀಡದೇ ರಾತ್ರೋರಾತ್ರಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿಯೂ ಪಿಎಸೈ ತಂಡ ಯಶಸ್ವಿಯಾಗುತ್ತದೆ.

ತ್ರಿವಳಿ ತಲಾಖ್…..
ಭಾರತದ ಮುಸ್ಲೀಂ ಸಮುದಾಯದಲ್ಲಿ ಈ ಹಿಂದೆ ತ್ರಿವಳಿ ತಾಲಾಖ್ ಪದ್ದತಿ ಜಾರಿಯಲ್ಲಿದ್ದು ಪತಿಯು ತನ್ನ ಪತ್ನಿಗೆ ತಲಾಖ್ ಎಂದು ಮೂರು ಬಾರಿ ಹೇಳಿ ವಿವಾಹವನ್ನು ಮುಕ್ತಗೊಳಿಸುವ ಪದ್ಧತಿಯಾಗಿತ್ತು. ತ್ರಿವಳಿ ತಲಾಖ್ ಅನ್ನು ಮುಖತವಾಗಿ ಮಾತ್ರವಲ್ಲದೇ, ವಾಟ್ಸಾಪ್, ಟ್ವೀಟ್, ಫೇಸ್ ಬುಕ್, ಇಲೆಕ್ಟ್ರಾನಿಕ್ ಮೆಡಿಯಾ ಮೂಲಕವು ನೀಡುವುದು ಸೂಕ್ತ ಕ್ರಮ ಎಂಬ ಪದ್ದತಿ ಈ ಹಿಂದಿತ್ತು. ಈ ಪದ್ದತಿ ಮುಸ್ಲೀಂ ಮಹಿಳೆಯರಿಗೆ ಧಮನಕಾರಿ ಪದ್ಧತಿ ಎಂದು ಸುಪ್ರೀಂ ಕೋರ್ಟಿನಲ್ಲಿ ಶಾಯರಾ ಬಾನು ಎನ್ನುವ ಮಹಿಳೆ ಪ್ರಶ್ನೆ ಮಾಡಿದ್ದರು. ಐದು ಮಂದಿ ನ್ಯಾಯಾಧೀಶರಿದ್ದ ಪೀಠವು ಬಹುಮತದೊಂದಿಗೆ 2017 ಆಗಸ್ಟ್ 22ರಂದು ಈ ತಲಾಖ್ ಪದ್ಧತಿಯನ್ನು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿತ್ತು. ಬಳಿಕ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರವು ಇದೇ ವರ್ಷ ಮುಸ್ಲಿಂ ಮಹಿಳಾ ಮದುವೆಯ ಹಕ್ಕಿನಡಿ ಕೇಸು ದಾಖಲಿಸುವ ಬಗ್ಗೆ ಕಾನೂನು ರಚಿಸಿತ್ತು. ಇದರಂತೆ ತ್ರಿವಳಿ ತಲಾಖ್ ಅಸಿಂಧು ಮಾತ್ರವಲ್ಲದೇ ಅಪರಾಧವೆಂದು ಮತ್ತು ಸೆಕ್ಷನ್ 4ರಡಿಯಲ್ಲಿ ಯಾವುದೇ ಮುಸ್ಲೀಂ ಪತಿ ಕಾನೂನು ಜಾರಿಗೆ ಬಂದ ಬಳಿಕ ತ್ರಿವಳಿ ತಲಾಖ್ ನೀಡಿದಲ್ಲಿ ಅದು ಜಾಮೀನು ರಹಿತ ಪ್ರಕರಣವಾಗಿದ್ದು ಒಂದೊಮ್ಮೆ ಜಾಮೀನು ನೀಡಬೇಕಾದ ವಿಚಾರಣೆ ಸಂದರ್ಭ ಪತ್ನಿಯ ಹೇಳಿಕೆ ಕೇಳಬೇಕಿದೆ. ಅಲ್ಲದೇ ಪ್ರಕರಣ ಸಾಭೀತಾದರೆ ಮೂರು ವರ್ಷದವರೆಗೆ ಸಜೆ, ದಂಡ ವಿಧಿಸಬಹುದಾಗಿದೆ.
– ರವಿಕಿರಣ್ ಮುರ್ಡೇಶ್ವರ್- ನ್ಯಾಯವಾದಿಗಳು, ಕುಂದಾಪುರ

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ:

ತ್ರಿವಳಿ ತಲಾಖ್: ಉಡುಪಿ ಜಿಲ್ಲೆಯಲ್ಲೇ ಮೊದಲ ಪ್ರಕರಣ ಕುಂದಾಪುರ ಠಾಣೆಯಲ್ಲಿ ದಾಖಲು!

Comments are closed.