ಕರಾವಳಿ

ಉಡುಪಿಯಲ್ಲಿ ಮಳೆಯ ನಡುವೆಯೂ ಕೃಷ್ಣಲೀಲೋತ್ಸವ, ವಿಟ್ಲಪಿಂಡಿ ಸಂಭ್ರಮ (Video)

Pinterest LinkedIn Tumblr

ಉಡುಪಿ: ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಶನಿವಾರ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ, ಹುಲಿವೇಷದ ಸ್ಪರ್ಧೆಯೊಂದಿಗೆ ವಿಟ್ಲಪಿಂಡಿ ಉತ್ಸವ ಅದ್ದೂರಿಯಾಗಿ ನಡೆಯುವ ಮೂಲಕ ಸಂಪನ್ನಗೊಂಡಿದೆ. ಬೆಳಿಗ್ಗೆನಿಂದಲೂ ದಾರಾಕರ ಮಳೆ ಸುರಿದರೂ ಕೂಡ ದೇವಸ್ಥಾನಕ್ಕೆ ಆಗಮಿಸಿ ವಿಟ್ಲಪಿಂಡಿ ಕಣ್ತುಂಬಿಕೊಳ್ಳುವ ಭಕ್ತರ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ವಿಟ್ಲಪಿಂಡಿಯಂದು ರಾಜಾಂಗಣದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದರು.

ಶ್ರೀಕೃಷ್ಣ ಮಠದಲ್ಲಿ ದೇವರಿಗೆ ವಿಟ್ಲಪಿಂಡಿಯಂದು ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಗೋಪಾಲಕೃಷ್ಣನ ಅಲಂಕಾರವನ್ನು ಮಾಡಿದರು.ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆಯನ್ನು ನೆರವೇರಿಸಿದರು. ಶ್ರೀಕೃಷ್ಣ ಮಠದಲ್ಲಿ ದೇವರಿಗೆ ವಿಟ್ಲಪಿಂಡಿಯಂದು ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಗೋಪಾಲಕೃಷ್ಣನ ಅಲಂಕಾರವನ್ನು ಮಾಡಿದರು.ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆಯನ್ನು ನೆರವೇರಿಸಿದರು.
ಮಧ್ವ ಸರೋವರದಲ್ಲಿ ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಉತ್ಸವ ಮೂರ್ತಿ ವಿಸರ್ಜನೆ ಮಾಡಿದರು.

ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಉತ್ಸವದಂದು ಪೇಜಾವರ ಮಠದ ಮುಂಭಾಗದಲ್ಲಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ವತಿಯಿಂದ ಆಯೋಜಿಸಿದ ಭಕ್ತಾದಿಗಳಿಗೆ ಮಜ್ಜಿಗೆ ಸೇವೆಯನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮಜ್ಜಿಗೆ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.ಪರಿಷತ್ತಿನ ಅಧ್ಯಕ್ಶರಾದ ವಿಷ್ಣು ಪಾಡಿಗಾರ್,ಕಾರ್ಯದರ್ಶಿ ಪ್ರವೀಣ್ ಉಪಾದ್ಯಾಯ,ಕುಮಾರಸ್ವಾಮಿ ಉಡುಪ,ಮಟ್ಟು ಲಕ್ಷ್ಮೀನಾರಾಯಣ ರಾವ್ ಹಾಗೂ ಶ್ರೀ ಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಭುವನೇಂದ್ರ ಕಿದಿಯೂರು,ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

Comments are closed.