ಗಲ್ಫ್

ರೂಪೇ ಕಾರ್ಡ್​ ಬಳಸಿ ಲಡ್ಡು ಖರೀದಿಸಿದ ಪ್ರಧಾನಿ ನರೇಂದ್ರ ಮೋದಿ; ಯುಎಇನಲ್ಲಿ ರೂಪೇ ಕಾರ್ಡ್​ಗೆ ಚಾಲನೆ

Pinterest LinkedIn Tumblr

ಅಬುದಾಬಿ: ತ್ರಿರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯುಎಇನಲ್ಲಿ ರೂಪೇ ಕಾರ್ಡ್​ಗೆ ಚಾಲನೆ ನೀಡಿದರು. ಕಾರ್ಯಕ್ರಮದ ನಂತರ ಮೋದಿ ರೂಪೇ ಕಾರ್ಡ್​ ಬಳಸಿ ಲಡ್ಡು ಖರೀದಿಸಿದ್ದಾರೆ.

ಶನಿವಾರ ಅಬುದಾಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ರೂಪೇ ಕಾರ್ಡ್​ಗೆ ಚಾಲನೆ ನೀಡಿದರು. ಈ ಮೂಲಕ ಭೂತಾನ್​, ಸಿಂಗಾಪುರದ ನಂತರ ಯುಎಇನಲ್ಲಿ ರೂಪೇ ಕಾರ್ಡ್​ಗೆ ಮಾನ್ಯತೆ ದೊರೆತಂತಾಗಿದೆ. ಈ ಮೂಲಕ ಭಾರತೀಯರು ರೂಪೇ ಕಾರ್ಡ್​ ಬಳಿ ಯುಎಇನಲ್ಲಿ ವ್ಯವಹಾರ ನಡೆಸಲು ಸಾಧ್ಯವಾಗಲಿದೆ.

ಕಾರ್ಯಕ್ರಮದ ನಂತರ ಮೋದಿ ರೂಪೇ ಕಾರ್ಡ್​ ಬಳಸಿ ಲಡ್ಡು ಖರೀದಿಸಿದರು. ಯುಎಇಯಿಂದ ಬಹ್ರೇನ್​ಗೆ ತೆರಳಲಿರುವ ಮೋದಿ ಅಲ್ಲಿ ಶ್ರೀನಾಥ್​ಜಿ ದೇಗುಲದಲ್ಲಿ ಲಡ್ಡುವನ್ನು ಅರ್ಪಿಸಲಿದ್ದಾರೆ. ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್​ ಮಾಡಿದೆ.

2012ರಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ ರೂಪೇ ಕಾರ್ಡ್ಗೆಗೆ ಚಾಲನೆ ನೀಡಿತ್ತು. ವಿದೇಶಿ ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ಗಳಿಗೆ ಪರ್ಯಾಯವಾಗಿ ದೇಶೀಯವಾಗಿ ರೂಪೇ ಕಾರ್ಡ್​ ಕಾರ್ಯನಿರ್ವಹಿಸುತ್ತಿದೆ. ಯುಎಇನಲ್ಲಿ ರೂಪೇ ಕಾರ್ಡ್​ ಪರಿಚಯಿಸುವ ಮುನ್ನ ನ್ಯಾಷನಲ್​ ಪೇಮೆಂಟ್ಸ್​ ಕಾರ್ಪೊರೇಷನ್​ ಆಫ್​ ಇಂಡಿಯಾ (ಎನ್​ಪಿಸಿಐ) ಮತ್ತು ಯುಎಇನ ಮರ್ಕ್ಯುರಿ ಪೇಮೆಂಟ್ಸ್​ ಸರ್ವೀಸ್​ ಒಪ್ಪಂದಕ್ಕೆ ಸಹಿ ಹಾಕಿದವು.

ಯುಎಇನ ಲುಲು, ಪೆಟ್ರೊಚೆಮ್​ ಮಿಡಲ್​ ಈಸ್ಟ್​, ಎನ್​ಎಂಸಿ ಹೆಲ್ತ್​ಕೇರ್​ ಮತ್ತು ಲ್ಯಾಂಡ್​ಮಾರ್ಕ್​ ಕಂಪನಿಗಳು ಸೇರಿದಂತೆ ಪ್ರಮುಖ 21 ಕಂಪನಿಗಳು ರೂಪೇ ಕಾರ್ಡ್​ನಿಂದ ಹಣ ಪಾವತಿಸಲು ಅನುವು ಮಾಡಿಕೊಡಲು ಸಮ್ಮಿತಿಸಿವೆ.

Comments are closed.