ರಾಷ್ಟ್ರೀಯ

ಹಬ್ಬದ ಮೆರವಣಿಗೆ ವೇಳೆ ಕರ್ತವ್ಯನಿರತ ಪೊಲೀಸ್‌ಗೆ ಮುತ್ತಿಟ್ಟ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ! ವಿಡಿಯೋ ವೈರಲ್‌

Pinterest LinkedIn Tumblr

ಹೈದರಾಬಾದ್‌: ಕರ್ತವ್ಯನಿರತ ಪೊಲೀಸ್‌ಗೆ ಬೊನಾಲು ಹಬ್ಬದ ಮೆರವಣಿಗೆ ವೇಳೆ ಮುತ್ತಿಟ್ಟ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಭಾನುವಾರ ಬಂಧಿಸಿದ್ದು, ಪ್ರಕರಣ ದಾಖಲಿಸಲಾಗಿದೆ.

ಬಂಧಿತ ವ್ಯಕ್ತಿಯು ಕುಡಿದು ಪ್ರಜ್ಞೆಯೇ ಇಲ್ಲದ ರೀತಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

https://www.facebook.com/WWW.NEWSHUBINDIA.IN/videos/696339574148531/?t=0

ಭಾನುವಾರ ಹೈದರಾಬಾದ್‌ ಸಿಟಿಯಲ್ಲಿ ಬೊನಾಲು ಹಬ್ಬವನ್ನು ಆಚರಿಸಲಾಯಿತು ಮತ್ತು ವ್ಯವಸ್ಥೆಗಳ ಅಂಗವಾಗಿ ನಮ್ಮ ಪೊಲೀಸ್‌ ಸಿಬ್ಬಂದಿಯು ನಲ್ಲಕುಂಟ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಬ್‌ ಇನ್ಸ್‌ಪೆಕ್ಟರ್‌ ಮಹೇಂದ್ರ ಮೆರವಣಿಗೆ ನಡೆಯುವ ಸ್ಥಳದಲ್ಲಿದ್ದರು. ಆಗ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಲ್ಕಜ್‌ಗಿರಿಯ ನಿವಾಸಿ ಭಾನು ಎಂಬಾತ ನಲ್ಲಕುಂಟ ಪ್ರದೇಶಲ್ಲಿ ಇನ್ಸ್‌ಪೆಕ್ಟರ್‌ ಮಹೇಂದ್ರರನ್ನು ತಡೆದು ಕುಡಿದ ಮತ್ತಿನಲ್ಲಿ ಮುತ್ತಿಟ್ಟಿದ್ದಾನೆ ಎಂದು ನಲ್ಲಕುಂಟ ಪೊಲೀಸ್‌ ಠಾಣೆಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಮುರಳೀಧರ್‌ ತಿಳಿಸಿದ್ದಾರೆ.

ಸದ್ಯ ಆರೋಪಿ ಭಾನು ವಿರುದ್ಧ ಸೆಕ್ಷನ್‌ 353ರ ಅಡಿಯಲ್ಲಿ ಪೊಲೀಸ್‌ ಅಧಿಕಾರಿಯನ್ನು ತಡೆದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Comments are closed.