ಮನೋರಂಜನೆ

ಗಾಯಕ ಉದಿತ್‌ ನಾರಾಯಣ್‌ಗೆ ಕಳೆದ ಒಂದು ತಿಂಗಳಿಂದ ಕೊಲೆ ಬೆದರಿಕೆ ಕರೆ

Pinterest LinkedIn Tumblr

ಮುಂಬೈ: ಅಪರಿಚಿತ ನಂಬರ್‌ನಿಂದ ಹಿರಿಯ ಗಾಯಕ ಉದಿತ್‌ ನಾರಾಯಣ್‌ ಅವರಿಗೆ ಕಳೆದ ಒಂದು ತಿಂಗಳಿಂದ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಕುರಿತು ಅಂಬೋಲಿ ಪೊಲೀಸ್‌ ಠಾಣೆಗೆ ದೂರು ದಾಖಲಿಸಲಾಗಿದೆ.

ಈ ಪ್ರಕರಣವನ್ನು ಅಂಬೋಲಿ ಪೊಲೀಸರು ಮುಂಬೈ ಅಪರಾಧ ವಿಭಾಗದ ಸುಲಿಗೆ-ವಿರೋಧಿ ಕೋಶ(AEC)ಕ್ಕೆ ವರ್ಗಾಯಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಕದ್ದ ಫೋನ್‌ನಿಂದ ಕರೆಗಳು ಬರುತ್ತಿದ್ದು, ಫೋನ್‌ ಲಕ್ಷ್ಮಣ್‌ ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ನಾಲ್ಕು ದಿನಗಳ ಹಿಂದೆ ಗಾಯಕ ಉದಿತ್‌ ನಾರಾಯಣ್‌ ಅವರಿಂದ ದೂರು ದಾಖಲಾಗಿದ್ದು, ಅಂದಿನಿಂದ ಅವರ ನಿವಾಸದ ಬಳಿ ಗಸ್ತು ತಿರುಗುತ್ತಿದ್ದೇವೆ ಎಂದು ಅಂಬೋಲಿ ಪೊಲೀಸ್‌ ಠಾಣೆಯ ಹಿರಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಭಾರತ್‌ ಗಾಯಕ್​ವಾಡ್​ ತಿಳಿಸಿದ್ದಾರೆ.

ತನಿಖೆ ವೇಳೆ ಪೊಲೀಸರಿಗೆ ಫೋನ್‌ ನಂಬರ್‌ ನಾರಾಯಣ ಬಿಲ್ಡಿಂಗ್‌ನ ಭದ್ರತಾ ಸಿಬ್ಬಂದಿ ಹೆಸರಿನಲ್ಲಿ ನೋಂದಣಿಯಾಗಿರುವುದು ತಿಳಿದುಬಂದಿದೆ. ವಾಚ್‌ಮನ್‌ ಅನ್ನು ವಿಚಾರಣೆಗೊಳಪಡಿಸಿದಾಗ ಕಳೆದ ತಿಂಗಳು ತನ್ನ ಊರಿಗೆ ಹಿಂತಿರುಗುವ ವೇಳೆ ತನ್ನ ಮೊಬೈಲ್‌ ಕಳ್ಳತನವಾಗಿದೆ ಎಂದು ತಿಳಿಸಿದ್ದಾನೆ.

Comments are closed.