ನವದೆಹಲಿ: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಪೊಲೀಸ್ ಬಲವನ್ನು ಬಳಸಿಕೊಂಡು ನನ್ನ ತಂದೆಯಿಂದ ನನ್ನನ್ನು ಬೇರೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಿರಣ್ ಬೇಡಿ ಮೊಮ್ಮಗಳು ಎಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ ಎಂದು ಬೇಡಿ ಮೊಮ್ಮಗಳು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Kiran Bedi's granddaughter, this little girl has mustered courage to go public against harassment meted out to her father by her mother and grandmother. Madam Bedi has apparently claimed her kidnapping when she's happy with her father and wants to be with him only. pic.twitter.com/8G0CVTMHN1
— Deepika Narayan Bhardwaj (@DeepikaBhardwaj) April 4, 2019
ತನ್ನನ್ನು ಕಿರಣ್ ಬೇಡಿ ಮೊಮ್ಮಗಳು ಎಂದು ಪರಿಚಯಿಸಿಕೊಂಡ ಬಾಲಕಿಯೊಬ್ಬಳು ‘ನಾನು ನನ್ನ ತಂದೆಯೊಂದಿಗೆ ಸುರಕ್ಷಿತವಾಗಿದ್ದೇನೆ, ನಾನು ಅಪಹರಣಕ್ಕೆ ಒಳಗಾಗಿಲ್ಲ. ಆದರೆ ಕಿರಣ್ ಬೇಡಿ ಅವರು ನನ್ನ ತಂದೆ ಮತ್ತು ಅವರ ಸ್ನೇಹಿತರಿಗೆ ತೊಂದರೆ ನೀಡುತ್ತಿದ್ದಾರೆ. ನನ್ನ ತಾಯಿ ಚಪ್ಪಲಿಯಿಂದ ನನ್ನ ತಂದೆಗೆ ಹೊಡೆದಿದ್ದರು ಮತ್ತು ಅವರ ಮೇಲೆ ಉಗುಳಿದ್ದರು. ಈ ವಿಷಯವನ್ನು ನಾನು ನಿಮಗೆ ತಿಳಿಸಿದಾಗ, ಅದು ಗಂಡ-ಹೆಂಡತಿ ನಡುವಿನ ವಿಷಯ ಎಂದು ಹೇಳಿದ್ದಿರಿ. ಆದರೆ ಈಗ ನೀವು ಪೊಲೀಸ್ ಬಲ ಉಪಯೋಗಿಸಿಕೊಂಡು ತಂದೆ-ಮಗಳನ್ನು ದೂರ ಮಾಡಲು ಯಾಕೆ ಪ್ರಯತ್ನಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾಳೆ.
ಈ ಕುರಿತು ಐಎಎನ್ಎಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಕಿರಣ್ ಬೇಡಿ ಅವರು ಟ್ವಿಟರ್ನಲ್ಲಿರುವ ವಿಡಿಯೋವನ್ನು ತೆಗೆಯುವಂತೆ ಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್ನಲ್ಲಿ ವಿಡಿಯೋ ಡಿಲೀಟ್ ಮಾಡಲಾಗಿದೆ. ಯೂಟ್ಯೂಬ್ ಅಧಿಕಾರಿಗಳಿಗೆ ಕೋರ್ಟ್ ಆದೇಶವನ್ನು ಕಳುಹಿಸಲಾಗಿದ್ದು, ಶೀಘ್ರ ಯೂಟ್ಯೂಬ್ನಿಂದಲೂ ವಿಡಿಯೋ ಡಿಲೀಟ್ ಆಗಲಿದೆ. ಈ ಪ್ರಕರಣ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
Comments are closed.