ಮನೋರಂಜನೆ

ಕನ್ನಡದಲ್ಲಿ ‘ಯುಗಾದಿ ಹಬ್ಬದ ಶುಭಾಶಯ’ ಕೋರಿದ ಬಾಲಿವುಡ್ ನಟ ಅಮಿತಾಭ್ ಬಚ್ಚನ್

Pinterest LinkedIn Tumblr

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಟ್ವೀಟ್ ಮಾಡಿ ‘ಯುಗಾದಿ ಹಬ್ಬದ ಶುಭಾಶಯ’ ಕೋರಿದ್ದಾರೆ. ‘ಗ್ರೀಟಿಂಗ್ಸ್ ಟು ಆಲ್’ ಎಂದು ಬರೆದು ತನ್ನ ಟ್ವೀಟರ್ ಪೇಜಿನಲ್ಲಿ ಬರೆದು ಪೋಸ್ಟ್ ಮಾಡಿರುವ ಅಮಿತಾಭ್ ಅವರ ಭಾಷಾ ಜ್ಞಾನ ಹಾಗೂ ಹಿಂದಿ ಜೊತೆ ಬೇರೆ ಭಾಷೆಗಳ ಮೇಲೆ ಅವರಿಗಿರುವ ಪ್ರೀತಿ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಬಾಲಿವುಡ್ ನಟ ಅಮಿತಾಭ್ ಇತ್ತೀಚಿಗಷ್ಟೆ ಸೌತ್ ಇಂಡಿಯನ್ ಸಿನಿಮಾದಲ್ಲಿ, ಅಂದರೆ ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುಲಿರುವ ನ್ಯೂಸ್ ಬಂದಿದೆ. ಅವರಿಗೆ ಎದುರು ನಟಿ ‘ಬಾಹುಬಲಿ’ ಚಿತ್ರದ ‘ಶಿವಗಾಮಿ’ ಖ್ಯಾತಿಯ ರಮ್ಯಕೃಷ್ಣ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಪ್ರಮುಖವಾಗಿ ಅಮಿತಾಭ್ ನಟಿಸುತ್ತಿರುವುದು ಭಾರಿ ಸುದ್ದಿಯಾಗಿದೆ. ಈ ಘಟನೆಯ ಬೆನ್ನಲ್ಲೇ ಇದೀಗ ನಟ ಅಮಿತಾಭ್ ಅವರು ಸೌತ್ ಇಂಡಿಯನ್ ಭಾಷಾಪ್ರೇಮವನ್ನೂ ಸಹಿತ ಮೆರೆದಿದ್ದಾರೆ.

ಅಮಿತಾಭ್ ಬಚ್ಚನ್ ಮಾಡಿರುವ ಟ್ವೀಟ್ ನೋಡಿ ಸಖತ್ ಖುಷಿಯಾದ ಅಭಿಮಾನಿಗಳು ಅವರ ಲೈಕ್ ಮಾಡಿ ಶೇರ್ ಕೂಡ ಮಾಡಿದ್ದಾರೆ. ಎಷ್ಟೋ ಮಂದಿ ಅವರು ಮಾಡಿರುವ ಟ್ವೀಟ್ ನೋಡಿ ‘ಲವ್ ಯೂ ಬಿಗ್ ಬಿ’ ಎಂದಿದ್ದಾರೆ. ಹಲವರಂತೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ಕನ್ನಡದಲ್ಲೂ ನಟಿಸಿ’ ಎಂದಿದ್ದಾರೆ. ಅಮಿತಾಭ್ ಬಚ್ಚನ್ ಎಲ್ಲವನ್ನೂ ಲೈಕ್ ಮಾಡುವ ಮೂಲಕ ಎಲ್ಲರನ್ನೂ ಖುಷಿಯ ಬೆಟ್ಟದ ಹತ್ತಿಸಿದ್ದಾರೆ.

ಇತ್ತೀಚಿಗೆ ಒಂದಾದ ಮೇಲೆ ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಅಮಿತಾಭ್ ತಮಗೆ ವಯಸ್ಸೇ ಆಗುವುದಿಲ್ಲ ಎಂಬಂತೆ ದಿನದಿನಕ್ಕೂ ಹೆಚ್ಚು ಹೆಚ್ಚು ಯಂಗ್ ಅಂಡ್ ಎನರ್ಜಿಟಿಕ್ ಆಗುತ್ತಿದ್ದಾರೆ. ಅವರ ನಟನೆ ಕೂಡ ದಿನದಿಂದ ದಿನಕ್ಕೆ ಹೆಚ್ಚುಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅಮಿತಾಭ್ ನಟನೆಯ ಚಿತ್ರಗಳೆಲ್ಲವೂ ಗಳಿಕೆ ಸೌಂಡ್ ಮಾಡದಿದ್ದರೂ ಅಮಿತಾಭ್ ಪಾತ್ರ ಪೋಷಣೆ ವಿಮರ್ಶಕರು ಮತ್ತು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ. ಒಟ್ಟಿನಲ್ಲಿ, ಹಲವು ಭಾಷೆಗಳಲ್ಲಿ ವಿಶ್ ಮಾಡುವ ಮೂಲಕ ನಟ ಅಮಿತಾಭ್ ಅವರು ಹಲವು ಮನಗಳನ್ನು ಗೆದ್ದಿದ್ದಾರೆ.

Comments are closed.