ಅಂತರಾಷ್ಟ್ರೀಯ

ವಿಚ್ಛೇದಿತ ಪತ್ನಿಗೆ 2.4 ಲಕ್ಷ ಕೋಟಿ ರೂ. ಪರಿಹಾರ ಕೊಟ್ಟು ಇತಿಹಾಸ ಬರೆದ ಅಮೇಜಾನ್ ಸಂಸ್ಥಾಪಕ !

Pinterest LinkedIn Tumblr

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಅಮೇಜಾನ್​ ಸಂಸ್ಥಾಪಕ ಜೆಫ್​ ಬೆಝೋಸ್ ತನ್ನ​ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ವಿಚ್ಛೇದನ ಒಪ್ಪಂದದ ಪ್ರಕಾರ ತನ್ನ ಆಸ್ತಿಯಲ್ಲಿನ 2.4 ಲಕ್ಷ ಕೋಟಿಯಷ್ಟು ಪಾಲನ್ನು ಅವರ ಪತ್ನಿಗೆ ನೀಡಿದ್ದರೂ, ಶ್ರೀಮಂತ ಸಾಲಿನಲ್ಲಿರುವ ಜೆಫ್​ ಅವರ ಸ್ಥಾನಕ್ಕೆ ಯಾವುದೇ ಚ್ಯುತಿ ಬಂದಿಲ್ಲ ಎಂಬುದು ವಿಶೇಷ.

ದೈತ್ಯ ಉದ್ಯಮಿ ಎಂದೇ ಹೆಸರುವಾಸಿಯಾಗಿದ್ದ ಜೆಫ್​ ಶೇ.16 ರಷ್ಟು ಅಂದರೆ 140 ಶತಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ. ಆದರೆ ವಿಚ್ಚೇದನ ಸಮಯದಲ್ಲಿ ತನ್ನ ಪತ್ನಿ ಮ್ಯಾಕೆಂಜಿಗಾಗಿ 2.4 ಲಕ್ಷ ಕೋಟಿಯಷ್ಟು ಪಾಲು ನೀಡಿದ್ದು. ಇತಿಹಾಸದಲ್ಲಿ ಅತಿದೊಡ್ಡ ವಿಚ್ಛೇದನ ಎಂದು ಸಾಬೀತಾಗಿದೆ.

ಜೆಫ್​ ಮತ್ತು ಮ್ಯಾಕೆಂಜಿ ಅವರು ವಿಚ್ಛೇದನಕ್ಕಾಗಿ ಸಲ್ಲಿಸಿದ ಡೈವೋರ್ಸ್​ ಅಗ್ರಿಮೆಂಟ್​ ಪ್ರಕಾರ ಅಮೇಜಾನ್​ ಸಂಸ್ಥೆಯ ಶೇ.4 ರಷ್ಟು ಪಾಲನ್ನು ತನ್ನ ಪತ್ನಿಗಾಗಿ ನೀಡಿದ್ದಾರೆ. ವಿಚ್ಛೇದನ ಒಪ್ಪಂದ ಪ್ರಕಾರ ದಿ ವಾಷಿಂಗ್ಟನ್​ ಪೋಸ್ಟ್​ ಮತ್ತು ಬಾಹ್ಯಾಕಾಶ ಪರಿಶೋಧನ ಸಂಸ್ಥೆಯಾಗಿರುವ ಬ್ಲೂ ಒರಿಜಿನ್​​ನಲ್ಲಿದ್ದ ಪಾಲನ್ನು ಪತ್ನಿ ಮ್ಯಾಕೆಂಜಿಗೆ ನೀಡಿದ್ದಾರೆ. ಈ ಮೂಲಕ ಮ್ಯಾಕೆಂಜಿ ಕೂಡ ಜಗತ್ತಿನ ಮೂರನೇ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಲಿದ್ದಾರೆ.

ನಾಲ್ಕು ಮಕ್ಕಳನ್ನು ಹೊಂದಿರುವ ಜೆಫ್​ ಮತ್ತು ಮ್ಯಾಕೆಂಜಿ 1993 ರಲ್ಲಿ ವಿವಾಹವಾಗಿದ್ದರು. 1994 ರಲ್ಲಿ ಜೆಫ್​ ಸಣ್ಣ ಗರಾಜಿನ ಮೂಲಕ ಅಮೇಜಾನ್ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಇದೀಗ ಜಗತ್ತಿನಲ್ಲಿ ಅತಿ ದೊಡ್ಡ ರೀಟೇಲ್​ ಸಂಸ್ಥೆಯಾಗಿ ಬೆಳೆದು ನಿಂತಿದೆ​

Comments are closed.