ಕರಾವಳಿ

ಹೈಕಾಡಿಯ ರಿಕ್ರಿಯೇಶನ್ ಕ್ಲಬ್ ಮೇಲೆ ಪೊಲೀಸರ ದಾಳಿ; 20 ಜುಗಾರಿಕೋರರು, 12 ಲಕ್ಷ ವಶ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಹೈಕಾಡಿ ಎಂಬಲ್ಲಿ ಅಕ್ರಮವಾಗಿ ನಡೆಸುತ್ತಿರುವ ರಿಕ್ರಿಯೇಶನ್ ಕ್ಲಬ್ ಇಸ್ಪೀಟ್ ಕ್ಲಬ್ಬಿಗೆ ಶುಕ್ರವಾರ ರಾತ್ರಿ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ಇವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಈ ವೇಳೆ ಅಂದರ್-ಬಾಹರ್ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಇಪ್ಪತ್ತು ಜನರನ್ನು ಬಂಧಿಸಿ ಆಟಕ್ಕೆ ಬಳಸುತ್ತಿದ್ದ ಹನ್ನೆರಡು ಲಕ್ಷದ ಇಪ್ಪತ್ತ್ಮೂರು ಸಾವಿರ ನಗದು ಹಾಗೂ ಒಂದು ಮೊಬೈಲ್ ಮತ್ತು ಹನ್ನೆರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಹಿಲಿಯಾಣ ನಿವಾಸಿ ಸುರೇಶ್ ಜೆ. ಶೆಟ್ಟಿ (51), ಕೋಟೇಶ್ವರ ಅಂಕದಕಟ್ಟೆಯ ಸುಭಾಷ ಶೆಟ್ಟಿ (45), ಬೊಂದೆಲ್ ಮಂಗಳೂರು ನಿವಾಸಿ ವಿಕ್ಟರ್ ಪಿಂಟೊ (72), ಮಲ್ಪೆ ಪಡುಕೆರೆಯ ಸುಧಾಕರ ಅಮೀನ್ (49, ಬಂಟ್ವಾಳದ ತೆಂಕಬೈಲೂರು ನಿವಾಸಿ (45), ಮಂಗಳೂರು ಪಂಪ್ ವೆಲ್ ನಿವಾಸಿ ಶಿವರಾಮ (48), ಕುಂದಾಪುರ ಹೈಕಾಡಿ ಹುಯ್ಯಾರು ನಿವಾಸಿ ಸುಧಾಕರ ಶೆಟ್ಟಿ (41), ಆವರ್ಸೆಯ ವಿಜಯ ಶೆಟ್ಟಿ (53), ಸಾಲಿಗ್ರಾಮ ಚಿತ್ರಪಾಡಿಯ ಮುರುಳೀಧರ (46), ಮಂಗಳೂರು ತುಂಬೆ ನಿವಾಸಿ ಬಶೀರ (35), ಕುಂದಾಪುರ ಕೊಡ್ಲಾಡಿಯ ಬಾಬು ಶೆಟ್ಟಿ (42), ಮಂಗಳೂರು ಕದ್ರಿಯ ಸೂಹನ್ (30), ಹೊನ್ನಾವರ ಕರ್ಕಿ ಮೂಲದವರಾದ ನವೀನ (33), ಮೋಹನ ನಾಯ್ಕ (40), ಹೆಬ್ರಿಯ ಸುರೇಶ ಶೆಟ್ಟಿ (47), ಕುಂದಾಪುರದ ಬೇಳೂರು ದೇವಸ್ಥಾನಬೆಟ್ಟು ನಿವಾಸಿಗಳಾದ ಸಂದೀಪ್ (27), ಮಂಜುನಾಥ (28), ಕಾಪು ಪೊಲಿಪು ನಿವಾಸಿ ಪ್ರಶಾಂತ (35), ಭಟ್ಕಳದ ಪ್ರಕಾಶ ಟಿ. ಗೊಂಡ (30), ಕಟೀಲು ನಿವಾಸಿ ವಿನೋದ (22) ಎಂದು ಗುರುತಿಸಲಾಗಿದೆ.

ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಉಡುಪಿ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಹೈಕಾಡಿ ಪ್ರೆಂಡ್ಸ್ ರಿಕ್ರೇಷಿಯನ್ ಕ್ಲಬ್ ಎಂಬ ಹೆಸರಿನ ಕಟ್ಟಡದ ಒಳಗೆ ಅಂದರ್- ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಕಾರ್ಕಳ ಉಪವಿಭಾಗದ ಎಎಸ್ಪಿ ಪಿ. ಕೃಷ್ಣಕಾಂತ ಹಾಗೂ ತಂಡದವರು ದಾಳಿ ನಡೆಸಿ ಆರೋಪಿಗಳ ಸಹಿತ 12,23,070 ನಗದು, 12 ಕಾರುಗಳು, ಮೊಬೈಲ್-1, ಟೇಬಲ್-2, ಹಾಗೂ ಕಾರ್ಡಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.