ಕರಾವಳಿ

ಸಿಎಂ ಕಾರು ಹೋಗುವಾಗ ತ್ರಾಸಿಯಲ್ಲಿ ಮೋದಿ..ಮೋದಿ.. ಎಂದು ಕೂಗಿದ ನಮೋ ಅಭಿಮಾನಿಗಳು! (Video)

Pinterest LinkedIn Tumblr

ಉಡುಪಿ: ಉತ್ತರಕನ್ನಡದಿಂದ ಕಾರ್ಯಕ್ರಮ ಮುಗಿಸಿ ರಸ್ತೆ ಮಾರ್ಗವಾಗಿ ಕೊಪ್ಪಕ್ಕೆ ತೆರಳುತ್ತಿದ್ದ ವೇಳೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾರು ಕುಂದಾಪುರ ತಾಲೂಕಿನ ತ್ರಾಸಿ ಸಮೀಪಿಸುವಾಗ ಮೋದಿ..ಮೋದಿ ಎಂದು ನರೇಂದ್ರ ಮೋದಿ ಅಭಿಮಾನಿಗಳು ಕೂಗಿದ್ದಾರೆ. ಆ ವಿಡಿಯೋ ಇದೀಗಾ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಗುರುವಾರ ರಾತ್ರಿ ವೇಳೆ ಸಿಎಂ ಬೈಂದೂರಿನಿಂದ ಕುಂದಾಪುರ ಕಡೆಗೆ ತಮ್ಮ ಕಾರಿನಲ್ಲಿ ತೆರಳುವಾಗ ಸಿಎಂ ಬರುವುದನ್ನು ಕಾದು ಕುಳಿತು ಮೋದಿ.. ಮೋದಿ.. ಎಂದು ಪ್ರಧಾನಿ ಮೋದಿಗೆ ಜೈಕಾರ ಕೂಗಿದ ಘಟನೆ ನಡೆದಿದೆ.

ಕರಾವಳಿಗರಿಗೆ ತಿಳುವಳಿಕೆ ಇಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿಗೆ ಮೋದಿ ಅಭಿಮಾನಿಗಳು ಈ ರೀತಿ ಸ್ವಾಗತ ಕೋರಿದ್ದಾರೆ. ಬುಧವಾರ ಕೂಡ ಕುಂದಾಪುರದಲ್ಲಿ ನಡೆದ ಮೀನುಗಾರರ ಸಮಾವೇಶಕ್ಕೆ ಆಗಮಿಸಿದ್ದ ಸಿಎಂ ಕಾರ್ಯಕ್ರಮ ಸಂದರ್ಭ ಮೋದಿ ಜೈಕಾರ ಕೂಗಲು ಬಿಜೆಪಿಗರು ಹಾಗೂ ಮೋದಿ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರೂ ಕೂಡ ಇಂಟೆಲಿಜೆನ್ಸ್ ವರದಿ ಮೇರೆಗೆ ಪೊಲೀಸರು ಅದಕ್ಕೆ ಬ್ರೇಕ್ ಹಾಕಿದ್ದರು.

Comments are closed.