ಕರಾವಳಿ

ಕುಂದಾಪುರದ ಹೆಸ್ಕುತ್ತೂರಿನಲ್ಲಿ ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿತ್ತು! (Video)

Pinterest LinkedIn Tumblr

ಕುಂದಾಪುರ: ಹಲವು ಸಮಯಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆಯಿಟ್ಟ ಬೋನಿಗೆ ಬಿದ್ದಿರುವ ಘಟನೆ ಕುಂದಾಪುರ ತಾಲೂಕಿನ ಕೊರ್ಗಿ ಸಮೀಪದ ಹೆಸ್ಕುತ್ತೂರು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

     

ಹೆಸ್ಕುತ್ತೂರಿನ ನೂಜಿ ಬೇಳೂರು ರಸ್ತೆಯ ಪೋಸ್ಟ್ ಮಾಸ್ಟರ್ ಶಂಕರ್ ಶೆಟ್ಟಿ ಎನ್ನುವರ ಮನೆಯ ಕೊಟ್ಟಿಗೆಗೆ ಮೂರು ದಿನಗಳ ಹಿಂದೆ ಚಿರತೆ ನುಗ್ಗಿತ್ತು. ಇದರಿಂದ ಆತಂಕಗೊಂಡ ಮನೆಮಂದಿ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು ಕಾರ್ಯಪ್ರವ್ರತ್ತರಾದ ಇಲಾಖೆ ಮನೆ ಸಮೀಪದಲ್ಲಿ ಬೋನು ಇಟ್ಟು ನಾಯಿ ಕಟ್ಟಿದ್ದರು. ಶುಕ್ರವಾರ ಮುಂಜಾನೆ ಇಲಾಖೆಯಿಟ್ಟ ಬೋನಿನೊಳಕ್ಕೆ ಚಿರತೆ ಸೆರೆಯಾಗಿದ್ದು ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಟ್ಟುಬಂದಿದ್ದಾರೆ.

ಡಿ.ಎಫ್.ಓ ಪ್ರಭಾಕರನ್, ಎಸಿಎಫ್ ಲೋಹಿತ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಉಪ ವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕರಾದ ವಿ. ಮಂಜು, ಶಂಕರ್, ಉದಯ್, ಅರಣ್ಯ ವೀಕ್ಷಕರಾದ ಸೋಮಶೇಖರ್, ವೆಂಕಟೇಶ್ಮ್ ಇಲಾಖೆ ವಾಹನ ಚಾಲಕ ಅಶೋಕ್ ಸ್ಥಳಕ್ಕೆ ಭೇಟಿ ನೀಡಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.