ಕರಾವಳಿ

ಭಕ್ತನ ದರ್ಶನದವರೆಗೆ ಕಾದು ಶ್ರೀ ಕೃಷ್ಣನ ದರ್ಶನ ಪಡೆದ ನಿರ್ಮಲಾ ಸೀತಾರಾಮನ್​ (Video)

Pinterest LinkedIn Tumblr

ಉಡುಪಿ: ಮಂಗಳವಾರದಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಉಡುಪಿಗೆ ಆಗಮಿಸಿದ್ದ ವೇಳೆ ​ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ತೆರಳಿ ಶ್ರೀ ಕೃಷ್ಣನ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರು ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಅಲ್ಲದೆ, ಇವರು ದರ್ಶನ ಪಡೆಯುವ ಸಂದರ್ಭದಲ್ಲಿ ಕನಕನ ಕಿಂಡಿ ಮೂಲಕ ದರ್ಶನ ಪಡೆಯುತ್ತಿದ್ದ ವ್ಯಕ್ತಿಯನ್ನು ಸರಿಸಲು ಪೊಲೀಸರು ಮುಂದಾದರು. ಆದರೆ, ಪೊಲೀಸರನ್ನು ತಡೆದ ರಕ್ಷಣಾ ಸಚಿವೆ, ಸಾಮಾನ್ಯ ಪ್ರಜೆಯಂತೆ ದೇವರ ದರ್ಶನ ಪಡೆದದ್ದಿಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.

Comments are closed.