ಅಂತರಾಷ್ಟ್ರೀಯ

ಆಸ್ಪತ್ರೆಯೊಂದರಲ್ಲಿ ಏಕಕಾಲಕ್ಕೆ ಗರ್ಭಿಣಿಯರಾದ 9 ಮಂದಿ ನರ್ಸ್​ಗಳು

Pinterest LinkedIn Tumblr

ಪೋರ್ಟ್​ಲೆಂಡ್: ಒಂದೇ ಆಸ್ಪತ್ರೆಯ 9 ನರ್ಸ್​ಗಳು ಒಂದೇ ಬಾರಿಗೆ ಗರ್ಭಿಣಿಯರಾಗಿರುವ ಘಟನೆ ಪೋರ್ಟ್​ಲೆಂಡ್​ನಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪ್ರಸೂತಿ ವಿಭಾಗದ 9 ನರ್ಸ್​ಗಳು ಗರ್ಭ ಧರಿಸಿದ್ದು, ಇನ್ನೊಂದೆರಡು ತಿಂಗಳೊಳಗೆ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳೇ ಫೋಟೋ ಸಮೇತ ಮಾಹಿತಿ ಹಂಚಿಕೊಂಡಿದ್ದು, ಗರ್ಭ ಧರಿಸಿರುವ 8 ನರ್ಸ್​ಗಳು ನಿಂತಿರುವ ಫೋಟೋವನ್ನು ಶೇರ್​ ಮಾಡಿದ್ದಾರೆ.

ಏಪ್ರಿಲ್ ಮತ್ತು ಜುಲೈನಲ್ಲಿ ಈ ಎಲ್ಲ 9 ನರ್ಸ್​ಗಳಿಗೂ ಹೆರಿಗೆಯಾಗಲಿದೆ. ತಮ್ಮ ಆಸ್ಪತ್ರೆಯ ಯೂನಿಫಾರಂ ಧರಿಸಿ ಫೋಟೋಗೆ ಪೋಸ್​ ನೀಡಿರುವ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ಈ ಹಿಂದೆ ಅಮೆರಿಕದ ಅರಿಜೋನಾ ಆಸ್ಪತ್ರೆಯ ಐಸಿಯುನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 16 ನರ್ಸ್​ಗಳು ಏಕಕಾಲಕ್ಕೆ ಗರ್ಭಿಣಿಯರಾಗಿದ್ದ ವಿಷಯ ಹೊರಬಿದ್ದಿತ್ತು. ಕಳೆದ ವರ್ಷ 16 ನರ್ಸ್​ಗಳು ಒಂದೇ ಬಾರಿ ಗರ್ಭಿಣಿಯರಾಗಿದ್ದು, ಕೆಲವೇ ದಿನಗಳ ಅಂತರದಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಪೋರ್ಟ್​ಲೆಂಡ್​ನಲ್ಲಿ ಕೂಡ ಇಂಥದ್ದೇ ಘಟನೆ ಹೊರಬಿದ್ದಿದೆ.

Comments are closed.