ಬೆಂಗಳೂರು: ಕೆಲ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಕಂಗಾಲಿಗೀಡು ಮಾಡುತ್ತವೆ. ಕೆಲವೊಮ್ಮೆ ಪುಸ್ತಕದ ಆಚೆಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾದರೆ, ಇನ್ನೂ ಕೆಲವೊಮ್ಮೆ ಕೆಲ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸುತ್ತವೆ. ಇತ್ತೀಚೆಗೆ ಬೆಂಗಳೂರು ಹೈಸ್ಕೂಲ್ ಒಂದರಲ್ಲಿ ತೃತೀಯ ಭಾಷೆ ಕನ್ನಡ ವಿದ್ಯಾರ್ಥಿಗಳಿಗೆ ಇದೇ ರೀತಿಯ ಪ್ರಶ್ನೆ ಕೇಳಲಾಗಿದೆ. ಪ್ರಶ್ನೆ ಪತ್ರಿಕೆ ನೋಡಿದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಸದ್ಯ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜರಾಜೇಶ್ವರಿ ನಗರದ ಇಂಗ್ಲೀಷ್ ಮಾಧ್ಯಮದ ಹೈಸ್ಕೂಲ್ನಲ್ಲಿ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆದಿತ್ತು. 8ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ಕೇಳಿದ ಒಂದು ಪ್ರಶ್ನೆ ಎಲ್ಲರ ಗಮನ ಸೆಳೆದಿತ್ತು.
ಅದೇನೆಂದರೆ, ‘ರೈತನ ಮಿತ್ರ ಯಾರು?’ ಈ ಪ್ರಶ್ನೆಗೆ ಮೂರು ಆಯ್ಕೆ ನೀಡಲಾಗಿತ್ತು. ಕುಮಾರಸ್ವಾಮಿ, ಎರೆಹುಳು, ಯಡಿಯೂರಪ್ಪ. ಈ ಪ್ರಶ್ನೆಗಳನ್ನು ನೋಡಿದ ವಿದ್ಯಾರ್ಥಿಗಳು ಒಮ್ಮೆ ಅಚ್ಚರಿಗೊಂಡಿದ್ದಾರೆ. ಯಡಿಯೂರಪ್ಪ ರೈತರ ಪರ ಇದ್ದೇನೆ ಎಂದು ಈ ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಕುಮಾರಸ್ವಾಮಿ ನಾನು ಮಣ್ಣಿನ ಮಗ ಎಂದು ಅನೇಕ ಬಾರಿ ಹೇಳಿಕೊಂಡಿದ್ದಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿ ಮಾಡಲು ಈ ಆಯ್ಕೆ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹೇಳಿದ್ದಾರೆ.
ಸದ್ಯ ಈ ಪ್ರಶ್ನೆ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಕ್ ಆಗಿದೆ. ಇದನ್ನು ನೋಡಿದ ಅನೇಕರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
Comments are closed.