ಕರಾವಳಿ

ರಸ್ತೆಯಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಉಡುಪಿ ಹೈವೇ ಪಟ್ರೋಲ್ ಪೊಲೀಸರ ಮಾನವೀಯತೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಸಾಸ್ತಾನ ಪಾಂಡೇಶ್ವರ ಡಿವೈಡರ್ ತಿರುವು ಸಮೀಪ ಕಾರು ಹಾಗೂ ಓಮ್ನಿ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಓಮ್ನಿ ಪಲ್ಟಿಯಾಗಿ ಅದರೊಳಗಿದ್ದ ಮೂವರು ಗಾಯಗೊಂಡಿದ್ದು ಉಡುಪಿ ಹೈವೇ ಪಟ್ರೋಲ್ ಪೊಲೀಸರು ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ತಮ್ಮ ವಾಹನದಲ್ಲಿ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.

ಬುಧವಾರ ಮಧ್ಯಾಹ್ನದ ಸುಮಾರಿಗೆ ಹೆದ್ದಾರಿ ಬಳಿ ಈ ಅವಘಡ ಸಂಭವಿಸಿದ್ದು ಓಮ್ನಿ ಕಾರು ರಾಷ್ಟ್ರೀಯ ಹೆದ್ದಾರಿ ಬಳಿಯ ಜಾಗದಲ್ಲಿ ಪಲ್ಟಿಯಾಗಿತ್ತು. ಕಾರಿನಲ್ಲಿದ್ದ ಕುಂದಾಪುರ ಮೂಲದ ಶುಭಕರ್ ಅವರಿಗೆ ಗಂಭೀರ ಗಾಯ ಮತ್ತು ರವಿ ಹಾಗೂ ನಾರಾಯಣ ಎನ್ನುವರಿಗೆ ಗಾಯಗಳಾಗಿತ್ತು. ಅವರನ್ನು ಸ್ಥಳೀಯರು ಕಾರಿನಿಂದ ಹೊರತಂದು ಉಪಚರಿಸಿದ್ದರು. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಅನಿರ್ವಾತೆಯಿದ್ದಿದ್ದು ಅದೇ ಸಮಯದಲ್ಲಿ ಉಡುಪಿಯಿಂದ ಕೋಟ ಮಾರ್ಗವಾಗಿ ಗಸ್ತಿನಲಿದ್ದ ಉಡುಪಿ ಹೈವೇ ಪಟ್ರೋಲ್-2ವಾಹನ ಸ್ಥಳಕ್ಕಾಗಮಿಸಿದ್ದು ಮೂವರು ಗಾಯಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದರು.

ಉಡುಪಿ ಟ್ರಾಫಿಕ್ ಎಎಸ್ಐ ಪ್ರಕಾಶ್ ಹಾಗೂ ಹೈವೇ ಪಟ್ರೋಲ್ ಚಾಲಕ ಪ್ರಶಾಂತ್ ಪಡುಕೆರೆ ತೋರಿದ ಸಮಯಪ್ರಜ್ಞೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Comments are closed.