ಕರಾವಳಿ

ಬಿಜೆಪಿ‌ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರಿಂದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Pinterest LinkedIn Tumblr

ಮಂಗಳೂರು, ಮಾರ್ಚ್.27 : ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಬೆಳಗ್ಗೆ ನಗರದ ಉರ್ವಾಸ್ಟೋರ್‌ನಲ್ಲಿರುವ ಕೊಟ್ಟಾರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ದೇವಸ್ಥಾನದ ಮೊಕ್ತೇಸರರಾದ ಸುರೇಂದ್ರ ರಾವ್ ಅವರು ನಳಿನ್ ಕುಮಾರ್ ಅವರಿಗೆ ದೇವಸ್ಥಾನದ ಪರವಾಗಿ ಶಾಲು ಹೊದಿಸಿ ಗೌರವಿಸಿ, ಆಶೀರ್ವಾದ ಮಾಡಿದರು.

ಈ ಸಂಧರ್ಭದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ‌ ವೇದವ್ಯಾಸ್ ಕಾಮತ್, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್,ರಾಜ್‌ಗೋಪಾಲ್ ರೈ,ಲಕ್ಷಣ್ ಶೇಟ್, ಭಾಸ್ಕರ್ ಚಂದ್ರ ಶೆಟ್ಟಿ, ವಾರ್ಡ್ ಅಧ್ಯಕ್ಷ ಉಮೇಶ್ ಶೆಟ್ಟಿ,ಮಂಡಲ‌ ಪ್ರಧಾನ ಕಾರ್ಯದರ್ಶಿ ರಮೇಶ್ ಕಂಡೆಟ್ಟು, ಶಕ್ತಿ ಕೇಂದ್ರ ಅಧ್ಯಕ್ಷ ಜನಾರ್ದನ್ ಕುಡುವ, ಬಿಜೆಪಿ ಚುನಾವಣಾ ಸಂಚಾಲಕರಾದ ಪ್ರೇಮಾನಂದ ಶೆಟ್ಟಿ, ಮಾಧ್ಯಮ ಪ್ರಮುಖ್ ಶ್ರೀನಿವಾಸ್ ಶೇಟ್, ಪಕ್ಷದ ಪ್ರಮುಖರಾದ ವಸಂತ್ ಜೆ ಪೂಜಾರಿ, ಕೃಷ್ಣ ಆಶೋಕ್ ನಗರ, ಸಚಿನ್ ರಾಜ್ ರೈ, ಮೋಹನ್ ಶೆಟ್ಟಿ ಉರ್ವಾಸ್ಟೋರ್, ವಸಂತ್ ಅಶೋಕ್ ನಗರ, ದೇವಸ್ಥಾನ ಸಮಿತಿಯ ಪ್ರಮುಖರಾದ ಶಶಿಧರ್.ಕೆ, ಗೋಪಾಲಕೃಷ್ಣ ಕಲ್ಬಾವಿ, ಗುರುಪ್ರಸಾದ್, ಗಿರಿಧರ್ ಶೆಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

Comments are closed.