ಕರಾವಳಿ

ಮಲ್ಪೆ ಬೀಚ್‍ನಲ್ಲಿ ಬಾಂಬ್ ಸ್ಫೋಟ ಮಾಡ್ತೇವೆಂದು ವೀಡಿಯೋ ಅಪ್ಲೋಡ್ ಮಾಡಿದ ಯುವಕ ಅರೆಸ್ಟ್

Pinterest LinkedIn Tumblr

ಉಡುಪಿ: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಮಾತ್ರವಲ್ಲದೇ ಮಲ್ಪೆ ಬೀಚ್‍ನಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಹಾಕುವ ಸೆಲ್ಫಿ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದ ಯುವಕನನ್ನು ಉಡುಪಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.

ಮಲ್ಪೆ ಶೇಖರ ಪೂಜಾರಿ ಎನ್ನುವರ ಪುತ್ರ ಸೃಜನ್ ಪೂಜಾರಿ (18) ಈ ದುಷ್ಕ್ರತ್ಯವೆಸಗಿ ಪೊಲೀಸರ ಅತಿಥಿಯಾಗಿದ್ದಾನೆ.

ಆತ ಮಾಡಿದ್ದೇನು?
ಮುಖಕ್ಕೆ ಬಟ್ಟೆ ಸುತ್ತಿಕೊಂಡು ‘ಪಾಕಿಸ್ತಾನ ಜಿಂದಾಬಾದ್, ನಮ್ಮ ಮುಂದಿನ ಗುರಿ ಮಲ್ಪೆ ಬೀಚ್, ಅಲ್ಲಿ ದೊಡ್ಡ ಪ್ರಮಾಣದ ಸ್ಪೋಟ ನಡೆಸಲಿದ್ದು ಇದರಿಂದ ಸ್ಥಳೀಯ ವ್ಯಾಪಾರಿಗಳು ಪೀಸ್ ಪೀಸ್ ಆಗಿ ಸಾಯಲಿದ್ದಾರೆ’ ಎನ್ನುವುದಾಗಿ ಅವ್ಯಾಚವಗಿ ಬೈದಿರುವ ಹಿಂದಿ ಭಾಷೆಯಲ್ಲಿರುವ ವಿಡಿಯೋ ತುಣುಕು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ಶೇರ್ ಆಗುತ್ತಲೇ ಮಲ್ಪೆ ಜನರು ಸೇರಿದಂತೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು.

ಸಾರ್ವಜನಿಕರ ಮಾಹಿತಿ ಮೇರೆಗೆ ಉಡುಪಿ ಎಸ್‌ಪಿ ನಿಶಾ ಜೇಮ್ಸ್ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಬಗ್ಗೆ ವಿಶೇಷ ತಂಡ ರಚಿಸಿದ್ದು ಕ್ಷಿಪ್ರ ಕಾರ್ಯಾಚರಣೆ ಮೂಲಕ ಪೊಲೀಸರು ಸೃಜನ್ ನನ್ನು ಬಂಧಿಸಿದ್ದಾರೆ.

ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ ಬಂಧಿತ ಸೃಜನ್ ತಾನೇ ವೀಡಿಯೊ ಮಾಡಿ ಮೊಬೈಲ್ ಗೆ ಅಪ್ಲೋಡ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತನಿಂದ ಮೊಬೈಲ್ ಫೋನ್ ಹಾಗೂ ಒಂದು ಟವೆಲ್ ವಶಕ್ಕೆ ಪಡೆಯಲಾಗಿದೆ ಉಡುಪಿ ಎಸ್‌ಪಿ ನಿಶಾ ಜೇಮ್ಸ್ ಹೇಳಿದ್ದಾರೆ.

Comments are closed.