ಕರಾವಳಿ

ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಪುರಾತನ ಕಾಲದ ಆಯುರ್ವೇದ ಪದ್ದತಿ

Pinterest LinkedIn Tumblr

ಥೈರಾಯ್ಡ್ ಕಾಯಿಲೆ ಅಂತೂ ಇತ್ತೀಚೆಗೆ ಎಲ್ಲರ ಮನೆ ನೆಂಟರ ಅಂತೇ ಆಗಿದೆ ಅದಕ್ಕೆ ಪರಿಹಾರ ಒದಗಿಸಲು ನಮ್ಮ ಹಿರೀಕರು ಅಶ್ವಗಂಧ ಥೈರಾಯ್‌ಗೆ ರಾಮಬಾಣ ಎಂದು ತಿಳಿದು ಅಶ್ವಗಂಧವನ್ನು ಪುರಾತನ ಕಾಲದಿಂದಲೂ ಆಯುರ್ವೇದ ಪದ್ದತಿಯಲ್ಲಿ ಹೆಚ್ಚು ಉಪಯೋಗಿಸಲ್ಪಟ್ಟ ಔಷದೀಯ ಸಸ್ಯ ಎಂದು ಹೆಸರುವಾಸಿ, ಇನ್ನೂ ಅನೇಕ ಔಷಧಿಗಳಲ್ಲಿ ಅಶ್ವಗಂಧವನ್ನು ಉಪಯೋಗಿಸ್ತಾರೆ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕೊರತೆ ಉಂಟಾದ್ರೆ, ನೀವು ನೆನೆಸಿಕೊಳ್ಳಬೇಕಾದ ಮೊದಲ ಸಸ್ಯ ಅಂದ್ರೆ ಅಶ್ವಗಂಧ ಅನೇಕ ಔಷಧೀಯ ಗುಣಗಳನ್ನು ಹೊಂದಿರೋ ಅಶ್ವಗಂಧದಲ್ಲಿ ಆರೋಗ್ಯಕ್ಕೆ ತುಂಬಾ ಯೂಸ್‌ಪೂಲ್.

ಕ್ಯಾನ್ಸರ್‌ನಂಥಾ ಅಪಾಯಕಾರಿ ರೋಗಗಳನ್ನು ಕೂಡಾ ಅಶ್ವಗಂಧದಿಂದ ಗುಣಪಡಿಸ್ಸಹುದು ಇದರಲ್ಲಿ ಬಹುಮುಖ್ಯವಾಗಿ ವೈಥಾನಿನ್ ಮತ್ತು ಸೊಮ್ಮಿಫೆರಿನ್ ಎಂಬ ರಾಸಾಯನಿಕಗಳಿವೆ ಇದರ ಬೇರುಗಳನ್ನು ಆಯುರ್ವೇದ ಮತ್ತು ಯುನಾನಿ ಔಷಧಿ ತಯಾರಿಸೋಕೆ ಬಳಸ್ತಾರೆ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳಿಂದ ತೆಗೆದ ಸಸ್ಯಕ್ಷಾರಗಳನ್ನು ಅನೇಕ ತರಹದ ಬಾಧೆಗಳನ್ನು ವಾಸಿ ಮಾಡೋಕೆ ಅಶ್ವಗಂಧ ರಾಮಬಾಣ. ಬ್ಯಾಕ್ಟಿರಿಯಾ ವಿರುದ್ಧ ಹೋರಾಡೋಕೆ, ಉರಿ ನಿವಾರಕ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ, ನಿದ್ರಾಹೀನತೆ, ಕ್ಯಾನ್ಸರ್, ಸಂಧಿವಾತ, ಮಧುಮೇಹವನ್ನು ಹತೋಟಿಗೆ ತರುತ್ತೆ ಅಲ್ಲೇ ನರಮಂಡಲವನ್ನು ಸಧೃಡವಾಗಿಡುತ್ತೆ ಥೈರಾಯಿಡ್, ಸ್ತ್ರೀಯರ ಮುಟ್ಟಿನ ಸಮಸ್ಯೆ, ಸಂತಾನಾಭಿವೃದ್ಧಿಗೆ ಸಹಾಯಕ.

ಥೈರಾಯ್ ಎಂದರೆ ಏನು ಎಂದು ನಿಮಗೆ ಗೊತ್ತಾ, ಗೊತ್ತಿಲ್ಲ ಅಂದ್ರೆ ನೋಡಿ ಥೈರಾಯ್ ನಿಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗೃಂಥಿ, ಈ ಗೃಂಥಿಯು ನಿಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕವಾದ ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ.

ಥೈರಾಯ್ ಯಾವ ಪಾತ್ರವನ್ನು ವಹಿಸುತ್ತದೆ, ಥೈರಾಯ್ಡ್ ಗ್ರಂಥಿಯು T3 ( ಥೈರಾಕ್ಸಿನ್ ) ಮತ್ತು T4 ( ಥೈರೋನಿನ್ ) ಎಂಬ ಎರಡು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

T3 ಮತ್ತು T4 ಹಾರ್ಮೋನ್‌ಗಳು ನಿಮ್ಮ ಶರೀರದಲ್ಲಿ ಯಾವ ಕಾರ್ಯ ನಿರ್ವಹಿಸುತ್ತವೆ.

ಥೈರಾಯ್ಡ್ ಹಾರ್ಮೋನುಗಳು ನಿಮ್ಮ ಶರೀರದ ಚಯಾಪಚಯವನ್ನು ( ಮೆಟಾಬಲಿಸಮ್ ) ನಿಯಂತ್ರಿಸುತ್ತವೆ ಈ ರೀತಿಯಾಗಿ ನಿಮ್ಮ ಶರೀರದ ಎಲ್ಲಾ ಕಣಗಳು ಏಕರೂಪವಾಗಿ ಹಾಗೂ ಸಮರ್ಥವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವವು ಚುಟುಕಿನಲ್ಲಿ ಹೇಳುವುದಾದರೆ ಶರೀರದ ಹೆಚ್ಚಿನ ಅಂಗಾಂಗಗಳ ಹಾಗೂ ಸಾಮನ್ಯ ಶಾರೀರಿಕ ಆರೋಗ್ಯವನ್ನು ಕಾಪಾಡುತ್ತವೆ .

ಥೈರಾಯ್ ತೊಂದರೆಯಿಂದ ಯಾವ ಯಾವ ಕಾಯಿಲೆಗಳು ಉಂಟಾಗಬಹುದು.

ಗಾಯ್ಕರ್ ( ಗಂಟಲುವಾಳ ರೋಗ ) : ಥೈರಾಯ್ ಗೃಂಥಿಯು ದೊಡ್ಡದಾಗಿ ಬೆಳೆದರೆ ಗಾಯ್ಕರ್ ಎಂದು ಕರೆಯುತ್ತಾರೆ.

ಹೈಪರ್‌ಥೈರಾಯ್ತಿಸಮ್ : ಥೈರಾಯ್ಡ್ ಗ್ರಂಥಿ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಉತ್ಪಾದನೆ ಮಾಡಿದರೆ ಉಂಟಾಗಬಹುದಾದ ರೋಗಕ್ಕೆ ಹೈಪರ್‌ಥೈರಾಯ್ತಿಸಮ್ ಎಂದು ಕರೆಯುತ್ತಾರೆ.

ಥೈರಾಯ್ಟಿಸ್ : ಥೈರಾಯ್ಡ್ ಗೃಂಥಿಯಲ್ಲಿ ಉರಿ ಊತ ಉಂಟಾಗಿ ಅದರಲ್ಲಿರುವ ಹಾರ್ಮೋನಿನ ಸಂಗ್ರಹವು ರಕ್ತಕ್ಕೆ ಸೋರಿಕೆಯಾಗಬಹುದು, ಹೀಗಾದಾಗ ರಕ್ತದಲ್ಲಿ ಹಾರ್ಮೋನ್ ಮಟ್ಟದ ಹೆಚ್ಚಳ ಉಂಟಾಗಬಹುದು, ಇದನ್ನು ಥೈರಾಯ್ಡಟಿಸ್ ಎಂದು ಕರೆಯುತ್ತಾರೆ.

ಥೈರಾಯ್ಡ್ ಗ್ರಂಥಿಯ ಗೆಡ್ಡೆಗಳು : ಹೆಚ್ಚಿನ ಸಂಧರ್ಭಗಳಲ್ಲಿ ಇವು ಸಾಮಾನ್ಯ ಗೆಡ್ಡೆಗಳಾಗಿರುತ್ತವೆ, ಅಪರೂಪವಾಗಿ ಕ್ಯಾನ್ಸರ್ ಕೂಡ ಆಗಿರಬಹುದು.

ಥೈರಾಯ್ಡ್ ಸಮಸ್ಯೆಗೆ ಅಶ್ವಗಂಧ ಹೇಗೆ ಸಹಾಯಕ.

ಹೈಪೋಥೈರಾಯ್ತಿಸಮ್ : ಅಶ್ವಗಂಧ ಟಿ 4ಹಾರ್ಮೋನುಗಳನ್ನು ಉತ್ಪಾದಿಸಲು ಹಕಾರಿಯಾಗುತ್ತೆ ಟಿ3 ಅನ್ನು ಸಕ್ರೀಯವಾಗಿ ಕಾರ್ಯ ನಿರ್ವಹಿಸಲು ಉತ್ತೇಜಿಸುತ್ತೆ ಅಶ್ವಗಂಧ ಹೈಪೋಥೈರಾಯ್ತಿಸಮ್‌ಗೆ ನೈಸರ್ಗಿಕ ಚಿಕಿತ್ಸೆಯನ್ನು ನೀಡುತ್ತದೆ.

ಹೈಪರ್ ಥೈರಾಯ್ತಿಸಮ್ : ಇಲ್ಲಿ ಅಶ್ವಗಂಧ ಟಿ4, ಟಿ3 ಆಗಿ ಮಾರ್ಪಾಡಾಗುವುದನ್ನು ನಿಯಂತ್ರಿಸುತ್ತದೆ ಇದು ಅಧ್ಯಾಯನ ನಡೆಸಿದಾಗಲೂ ಸಾಬೀತಾಗಿದೆ.

Comments are closed.