ಕರಾವಳಿ

ನಡುರಸ್ತೆಯಲ್ಲಿ ರೌಡಿಗಳಂತೆ ಹೊಡೆದಾಡಿದ ವಿದ್ಯಾರ್ಥಿಗಳು! (Video)

Pinterest LinkedIn Tumblr

ಕುಂದಾಪುರ: ಮೊನ್ನೆ ಮೊನ್ನೆ ಇಲ್ಲಿನ ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದೂ ಅಲ್ಲದೆ ಪದವಿಪೂರ್ವ ಕಾಲೇಜ್ ಆವರಣದಲ್ಲೇ ಚೂರಿ ಇರಿದು ಪರಾರಿಯಾದ ಘಟನೆ ಮಾಸುವ ಮುನ್ನಾ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಸೋಮವಾರ ನಡುರಸ್ತೆಯಲ್ಲಿ ಬೇರೆ ಬೇರೆ ಕಾಲೇಜ್ ವಿದ್ಯಾರ್ಥಿಗಳು ಕೈಯಲ್ಲಿ ರಾಡ್ ಹಿಡಿದು ರೌಡಿಗಳಂತೆ ಹೊಡೆದಾಡಿಕೊಂಡಿದ್ದಾರೆ.

ಕುಂದಾಪುರ ಪ್ರತಿಷ್ಠಿತ ಭಂಡಾರ್ಕಾರ್ಸ್ ಕಾಲೇಜ್ ವಿದ್ಯಾರ್ಥಿಗಳಿಗೆ ಅದೇ ಕಾಲೇಜ್ ವಿದ್ಯಾರ್ಥಿ ಹಾಗೂ ಆತನ ಸ್ನೇಹಿತರು ಹಿಗ್ಗಾಮುಗ್ಗಾ ತಳಿಸಿ್ದ್ದಾರೆ. ಹಲ್ಲೆಗೆ ಒಳಗಾದ ವಿದ್ಯಾರ್ಥಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾರ್ವಜನಿಕರು ಮಧ್ಯೆ ಪ್ರವೇಶಿಸದಿದ್ದರಿಂದ ಸಂಭವನೀಯ ಅನಾಹುತ ತಪ್ಪಿದೆ.

ಕಳೆದ ಶನಿವಾರ ವಿದ್ಯಾರ್ಥಿಯನ್ನು ನೋಡಿದ ವಿಚಾರದಲ್ಲಿ ಅದೇ ಕಾಲೇಜ್ ವಿದ್ಯಾಥಿಗಳು ಹಲ್ಲೆ ನಡೆಸಿದ್ದರು. ಇದೇ ವಿಷಯ ಮನಸ್ಸಲ್ಲಿಟ್ಟುಕೊಂಡು ಹಲ್ಲೆಗೆ ಒಳಗಾದ ವಿದ್ಯಾರ್ಥಿ ತನ್ನ ಸ್ನೇಹಿತರ ತಂಡದ ಜತೆ ಕಾಲೇಜ್ ಕ್ಯಾಂಪಾಸಿಗೆ ತೆರಳುವ ರಸ್ತೆಗೆ ಬಂದಿದ್ದ. ಊಟದ ಸಮಯದಲ್ಲಿ ಹಲ್ಲೆ ಮಾಡಿದ ವಿದ್ಯಾರ್ಥಿ ಹೊರಗೆ ಬರುತ್ತಿರುವುದ ಕಂಡು ಏಕಾಏಕಿ ಕೈಯಲ್ಲಿ ರಾಡ್ ಹಿಡಿದು ಮನಬಂದಂತೆ ಥಳಿಸಿದ್ದಾರೆ. ಬಿಡಸಲು ಬಂದವರ ಮೇಲೂ ವಿದ್ಯಾರ್ಥಿಗಳು ಏರಿ ಹೋಗಿದ್ದಾರೆ.

Comments are closed.