ಕರಾವಳಿ

ಕೋಟ್ಯಾಂತರ ರೂ.ಗಳಿಗೆ ನಕಲಿ ವಿಗ್ರಹ ಮಾರಾಟಕ್ಕೆ ಯತ್ನ : 2,69,000 ರೂ ಮೌಲ್ಯದ ಸೊತ್ತು ಸಹಿತಾ ಇಬ್ಬರು ಆರೋಪಿಗಳ ಸೆರೆ

Pinterest LinkedIn Tumblr

ಮಂಗಳೂರು : ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣಾ ಪೊಲೀಸರು ಹಾಗೂ ಮಂಗಳೂರು ಸಿಸಿಬಿ ಘಟಕದ ಪೊಲೀಸರು ನಡೆಸಿದ ಮಹತ್ವದ ಜಂಟಿ ಕಾರ್ಯಾಚರಣೆಯೊಂದರಲ್ಲಿ ನಕಲಿ ವಿಗ್ರಹವನ್ನು ಕೋಟ್ಯಾಂತರ ರೂ. ಗಳಿಗೆ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೊತ್ತು ಸಮೇತಾ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆಯ ಸುಬ್ರಹ್ಮಣ್ಯ ಭಟ್ ( 44 ) ಹಾಗೂ ಕೇರಳದ ಕೊಲ್ಲಂ ಜಿಲ್ಲೆಯ ಚಂಗನ್ ಕುಳಂಗರೆ ನಿವಾಸಿ ನಿಸ್ಸಾರ್ ಯು ( 54 ) ಗುರುತಿಸಲಾಗಿದೆ. ಆರೋಪಿಗಳ ವಶದಿಂದ ದೇವಿಯ ವಿಗ್ರಹ ಹಾಗೂ ಆಲ್ಟೋ ಕಾರು ಸೇರಿ ಒಟ್ಟು ಸುಮಾರು 2,69,000/- ರೂ ಮೌಲ್ಯದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ದಿನಾಂಕ:24-01-2019 ರಂದು ಮದ್ಯಾಹ್ನ 2-00 ಗಂಟೆಗೆ ಮಂಗಳೂರು ನಗರದ ಫುಟ್ ಬಾಲ್ ಮೈದಾನಕ್ಕೆ ಆರೋಪಿಗಳಾದ ಸುಬ್ರಹ್ಮಣ್ಯ ಭಟ್ ಹಾಗೂ ನಿಸ್ಸಾರ್ ಯು ರವರು ಪುರಾತನ ಕಾಲದ ದೇವಿಯ ವಿಗ್ರಹವೊಂದನ್ನು ಗಿರಾಕಿಯೊಬ್ಬರಿಗೆ ಮಾರಾಟ ಮಾಡಲು ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳ ವಶದಿಂದ “ಸಿಂಹದ ಮೇಲೆ ಕುಳಿತಿರುವ ದೇವಿಯ ವಿಗ್ರಹ”, ವಿಗ್ರಹವನ್ನು ಮಾರಾಟ ಮಾಡಲು ಉಪಯೋಗಿಸಿರುವ ಕಾರು ಹಾಗೂ ಮೊಬೈಲ್ ಹ್ಯಾಂಡ್ ಸೆಟ್ಟನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ದೇವಿಯ ವಿಗ್ರಹವು ಹಿತ್ತಾಳೆಯ ವಿಗ್ರಹವಾಗಿದ್ದು. ಆರೋಪಿ ನಿಸ್ಸಾರ್ ಮಂಗಳೂರು ನಗರದ ಒಂದು ಅಂಗಡಿಯಿಂದ 66,000/- ರೂ ಹಣಕ್ಕೆ ಖರೀದಿಸಿರುತ್ತಾನೆ. ಆರೋಪಿಗಳಿಬ್ಬರು ಈ ವಿಗ್ರಹವು ಪುರಾತನ ಕಾಲದ ಪಂಚ ಲೋಹದ ವಿಗ್ರಹವೆಂದು ಹೇಳಿ ಗಿರಾಕಿಗಳನ್ನು ನಂಬಿಸಿ, ವಿಗ್ರಹಕ್ಕೆ 2 ಕೋಟಿ ಬೆಲೆ ನಿಗದಿಪಡಿಸಿ, ಗಿರಾಕಿಗಳನ್ನು ಮೋಸ ಮಾಡಲು ಪ್ರಯತ್ನಿಸಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿರುತ್ತದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ಕಬ್ಬಳ್ ರಾಜ್ ಹಾಗೂ ಸಿಬ್ಬಂದಿಗಳಾದ ಶೀನಪ್ಪ ಪೂಜಾರಿ, ಮಣಿ, ರಾಜ ಮತ್ತು ಆಶಿತ್ ಡಿಸೋಜಾ ಭಾಗವಹಿಸುತ್ತಾರೆ.

Comments are closed.