ಕರಾವಳಿ

ರಾಜಕೀಯದಲ್ಲಿ ಸನ್ಯಾಸಿಗಳಿಲ್ಲ, ಆದರೂ ಆಪರೇಶನ್ ಕಮಲ ನಾವು ಮಾಡಿಲ್ಲ: ಕೋಟ ಶ್ರೀನಿವಾಸ್ ಪೂಜಾರಿ (Video)

Pinterest LinkedIn Tumblr

ಉಡುಪಿ: ಜೆಡಿಎಸ್ ಮತ್ತು ಕಾಂಗ್ರೆಸ್ಸಿಗೆ ಅಧಿಕಾರಕ್ಕಾಗಿ ಜನರು ಸ್ಪಷ್ಟ ಬಹುಮತ ನೀಡಿಲ್ಲ. ಬಹುದೊಡ್ಡ ಪಕ್ಷವಾದ ಬಿಜೆಪಿಗೆ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದು ನಾವು ಬಹುಮತದ ಸಂಖ್ಯೆಗೆ ಹತ್ತಿರವಿರುವಾಗ ನಮಗೆ ಇನ್ನಷ್ಟು ಬೆಂಬಲ ನೀಡುವವರಿದ್ದರೆ ನಮ್ಮ ಸ್ವಾಗತವಿದೆ. ರಾಜಕಾರಣ ವ್ಯವಸ್ಥೆಯಲ್ಲಿ ಯಾರೂ ಸನ್ಯಾಸಿಗಳಿಲ್ಲ. ಬೆಂಬಲ ನೀಡುವವರಿದ್ದರೆ ಅದರ ಬಗ್ಗೆ ಯೋಚಿಸುತ್ತೇವೆ. ಸದ್ಯ ನಾವಂತೂ ಆಪರೇಶನ್ ಕಮಲ ಮಾಡಿಲ್ಲ. ಬಿಜೆಪಿ ಪಾರ್ಟಿ ಸಭೆ ಬಗ್ಗೆ ಸಮ್ಮಿಶ್ರ ಸರಕಾರದ ನಾಯಕರು ಮಾಡಿದ ಠೀಕೆ ಟಿಪ್ಪಣಿ ಮಾಡಿದ್ದಕ್ಕೆ ಅವರೇ ಉತ್ತರಿಸಲಿ. ರಾಜ್ಯದಲ್ಲಿ ಬಿಜೆಪಿಯನ್ನು ಜನರು ಬೆಂಬಲಿಸಲಿದ್ದಾರೆ. ಬಿಜೆಪಿಯ ಹೋರಾಟ ಮುಂದುವರೆಯಲಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಪಡೆಯಲಿದ್ದೇವೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ದೆಹಲಿಯಲ್ಲಿ ಜ.11ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದ್ದು ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಸಂಸದರು, ಎಂ.ಎಲ್.ಸಿ.ಗಳು ಭಾಗವಹಿಸಿದ್ದು 12ರಂದು ಕಾರ್ಯಕಾರಿಣಿ ಮುಗಿದು ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಪೂರ್ವತಯಾರಿಗಾಗಿ 13ರಂದು ಇದು ಮುಂದುವರಿದಿತ್ತು. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಬಗ್ಗೆ ದೆಹಲಿಯಲ್ಲಿ ಬಿಜೆಪಿ ಚರ್ಚೆ ಮಾಡುತ್ತಿದ್ದರೆ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಗೊಂದಲ ಮಾಡಿಕೊಂಡರೆಂಬುದರ ಬಗ್ಗೆ ಅವರೇ ಉತ್ತರಿಸಬೇಕು. ಬಿಜೆಪಿ ಆಪರೇಶನ್ ಕಮಲ ಮಾಡಿದೆ ಎಂಬ ಮಾತು ಅವರೇ ಹೇಳಿದ್ದು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದು ಅವರನ್ನು ನಾವು ಓಲೈಸಿಕೊಳ್ಳುತ್ತೇವೆಂಬ ಹೇಳಿಕೆ ಬಳಿಕ ರಾಷ್ಟ್ರೀಯ ಪಕ್ಷವಾಗಿ ನಾವು ಜಾಗ್ರತೆ ಮಾಡಿಕೊಳ್ಳಲು ಹರಿಯಾಣದಲ್ಲಿ ಸೇರಿದ್ದು ನಿಜ. ದೇವೆಗೌಡರು ಮತ್ತು ಸಿದ್ಧರಾಮಯ್ಯ ಈ ಹಿಂದೆ ಪರಸ್ಪರ ಆಡಿಕೊಂಡ ಮಾತುಗಳನ್ನು ಈ ಸಂದರ್ಭ ಮತ್ತೆ ನೆನಪು ಮಾಡಿಕೊಳ್ಳಲಿ. ನಮ್ಮಲ್ಲಿ ಸ್ಪಷ್ಟತೆಯಿದೆ. ರಾಷ್ಟ್ರೀಯತೆಗಾಗಿ ಕಾರ್‍ಯಕಾರಿಣಿ ನಡೆಸಿ ಬಳಿಕ ಲೋಕಸಭೆ ಪೂರ್ವತಯಾರಿ ಬಗ್ಗೆ ಚರ್ಚಿಸಿದೆವು ಎಂದರು.

ಬಿಜೆಪಿಯು ಕುದುರೆ ವ್ಯಾಪಾರ, ಆಪರೇಶನ್ ಕಮಲ ಮಾಡುತ್ತಾರೆನ್ನುವ ಅಪಪ್ರಚಾರ ಮಾಡುವ ಸರಕಾರ ಮೊದಲು ತಮ್ಮ ಬಗ್ಗೆ ಪರಾಮರ್ಷೆ ಮಾಡಿಕೊಳ್ಳಬೇಕು. ಆರು ತಿಂಗಳಿನಿಂದ ಜನರ ಪರವಾಗಿ ಕೆಲಸ ಮಾಡಿಲ್ಲ. ಹಿಂದುಳಿದ ವರ್ಗದ ಮಂತ್ರಿ ಸಹಾಕನ ಜೊತೆ ವಿಧಾನ ಸೌಧಕ್ಕೆ 25 ಲಕ್ಷ ಹಣವನ್ನು ಸಾಗಿಸುವ ಯತ್ನ ಮಾಡಿದ್ದರೂ ಅವರನ್ನೇ ಇಟ್ಟು ಅಧಿಕಾರ ಮುಂದುವರಿಯುವುದಾರೆ ಈ ಬಗ್ಗೆ ನಾವು ವಿರೋಧ ಪಕ್ಷದಲ್ಲಿದ್ದುಕೊಂಡು ಸದನದಲ್ಲಿ ಏನು ಮಾಡಬೇಕೋ ಮಾಡುತ್ತೇವೆ. ಲೋಕೋಪಯೋಗಿ ಇಲಾಖೆ ಸಂಪೂರ್ಣ ಸರ್ವನಾಶವಾಗಿದೆ. ಇದೊಂದು ಪರ್ಸಂಟೇಜ್ ಸರಕಾರವೆನ್ನುವುದು ಎನ್ನುವ ಹಂತಕ್ಕೆ ಬಂದಿದ್ದು ಮುಂದಿನ ಅಧಿವೇಶನದಲ್ಲಿ ಸರಕಾರದ ಲೋಪಗಳನ್ನು ಪ್ರಶ್ನಿಸುತ್ತೇವೆಂದು ಕೋಟ ಆಕ್ರೋಷ ವ್ಯಕ್ತಪಡಿಸಿದರು.

Comments are closed.