ಕರಾವಳಿ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಬೇಗ ಸೋಂಕುಗಳಿಗೆ ತುತ್ತಾಗುತ್ತಾರೆ…ನಿಜನಾ?

Pinterest LinkedIn Tumblr

ಮಳೆಯಿಂದ ಬ್ಯಾಕ್ಟೀರಿಯಾಗಳು ಆಕ್ಟಿವ್ ಆಗಿ ಕೆಲಸ ಮಾಡುತ್ತವೆ ಅಂದರೆ ಕ್ರಿಯಾ ವಾಗಿ ಕೆಲಸ ಮಾಡುತ್ತವೆ ಇದರಿಂದ ಆತ್ಮ ಶಕ್ತಿ ಕಡಿಮೆ ಇರುವವರು ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಬೇಗ ರೋಗಗಳಿಗೆ ತುತ್ತಾಗುತ್ತಾರೆ ಅಂದರೆ ಸೋಂಕುಗಳಿಗೆ ತುತ್ತಾಗುತ್ತಾರೆ.

ವೈರಲ್ ಜ್ವರ : ವೈರಲ್ ಜ್ವರಗಳಲ್ಲಿ ಸ್ವಲ್ಪ ಅಥವಾ ತೀವ್ರವಾದ ಜ್ವರ ಇರಬಹುದು ಜ್ವರದ ಜೊತೆಯಲ್ಲಿ ಕೆಮ್ಮು ಗಂಟಲುನೋವು ಗಂಟಲಲ್ಲಿ ಕಿರಿಕಿರಿ ಕೂಡ ಉಂಟಾಗಬಹುದು ಮತ್ತು ನೆಗಡಿ ಕೂಡ ಇರಬಹುದು ಕಣ್ಣಿನಲ್ಲಿ ಹುರಿ ಮತ್ತು ನೀರು ಬರುವುದು.

ಮುಂಜಾಗ್ರತೆ ಮತ್ತು ಚಿಕಿತ್ಸೆ : ಸತತವಾಗಿ ಕೈಗಳನ್ನು ಮತ್ತು ಕಣ್ಣುಗಳನ್ನು ಸ್ವಚ್ಛವಾದ ನೀರಿನಿಂದ ತೊಳೆಯುವುದು ಮತ್ತು ನಮ್ಮನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳುವುದು ಸಾಧ್ಯವಾದಷ್ಟು ದ್ರವ ವಸ್ತುಗಳನ್ನು ಅಂದರೆ ಆಹಾರಗಳನ್ನು ಸೇವಿಸುವುದು ಮತ್ತು ಬೆಚ್ಚಗಿನ ನೀರನ್ನು ಕುಡಿಯುವುದು ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದು ಮತ್ತು ಹೊರಗಡೆ ಪದಾರ್ಥಗಳನ್ನು ತಿನ್ನದೆ ಇರುವುದು ಆದಷ್ಟು ಪ್ರತಿದಿನ ಸ್ನಾನ ಮಾಡುವುದು ಕಾಯಿಲೆಗೆ ಸಂಬಂಧಪಟ್ಟ ಮಾತ್ರೆಗಳನ್ನು ಡಾಕ್ಟರ್ ಬಳಿ ಕೇಳಿ ಪಡೆಯುವುದು ಉತ್ತಮ.

ಶಿಲೀಂದ್ರಗಳ ಸೋಂಕು : ಚರ್ಮದ ಒಳಪದರಗಳಲ್ಲಿ ಮತ್ತು ಕಂಕುಳು ಗಳಲ್ಲಿ ತೇವಾಂಶ ಮತ್ತು ಬೆವರುವುದರಿಂದ ತುರಿಕೆ ಹುರಿ ಮತ್ತು ಚರ್ಮ ಕೆಂಪಾಗುವುದು ಹೆಚ್ಚಾಗುತ್ತದೆ.

ಮುಂಜಾಗ್ರತೆ ಕ್ರಮಗಳು : ಚರ್ಮದ ಮೇಲೆ ಹೆಚ್ಚಿನ ನೀರು ಅಥವಾ ಬೆವರು ಇರದಂತೆ ಕಾಪಾಡಿಕೊಳ್ಳುವುದು ಆಗಾಗ ಉತ್ತಮ ಸಾಬೂನನ್ನು ಬೆಳೆಸಿ ಸ್ನಾನ ಮಾಡುವುದು ಹಾಗೂ ಮನೆಯಲ್ಲಿದ್ದಾಗ ತೆಳುವಾದ ಬಟ್ಟೆಯನ್ನು ಧರಿಸಿ ಫ್ಯಾನ್ ಕೆಳಗೆ ಕೊಡುವುದು ಉತ್ತಮ ಅಭ್ಯಾಸ ತೇವಾಂಶ ಕಡಿಮೆ ಇದ್ದಾಗ ಶಿಲಿಂದ್ರಗಳು ಹರಡುವುದಿಲ್ಲ ಇನ್ನು ಮಳೆ ನೀರಿನಿಂದ ಹರಡುವ ಕಾಯಿಲೆಗಳು ಬೇಧಿ, ಟೈಫಾಯಿಡ್ ಜ್ವರ, ಹೆಪಟೈಟಿಸ್ಎ.

ಸೊಳ್ಳೆಗಳಿಂದ ಬರುವ ಕಾಯಿಲೆಗಳು : ಮಲೇರಿಯಾ ಕಾಯಿಲೆ ಹೆಣ್ಣು ಸೊಳ್ಳೆಯಿಂದ ಹರಡುವಂತದು ಮಲೇರಿಯಾ ಕಾಯಿಲೆಯಿಂದ ಸಾಮಾನ್ಯವಾಗಿ ಚಳಿ ಸೆಕೆ ಮತ್ತು ಬೆವರು ಇರುವುದಿಲ್ಲ ಆದರೆ ರೋಗಿಗೆ ಚಳಿಯ ಜೊತೆ ನಡುಕ ತಲೆನೋವು ವಾಂತಿ ಆಗುವಂತಹ ಭಾವನೆಗಳು ಬರುತ್ತಿರುತ್ತವೆ ಈ ಕಾಯಿಲೆಯನ್ನು ರಕ್ತ ಪರೀಕ್ಷೆ ಯ ಮುಖಾಂತರ ನಾವು ತಿಳಿಯಬಹುದು ರಕ್ತದಲ್ಲಿ ಮಲೇರಿಯಾ ಇದೆ ಎಂದು ಕಂಡು ಬಂದರೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ ದಾರಿ.

ಮಲೇರಿಯಾ ರೋಗವನ್ನು ತಡೆಗಟ್ಟುವುದು : ಈ ಹೆಣ್ಣು ಸೊಳ್ಳೆಗಳು ಹೆಚ್ಚಿನ ಕೊಳಚೆ ಪ್ರದೇಶಗಳಲ್ಲಿ ಕಂಡುಬರುತ್ತವೆ ಹಾಗೂ ಮೋರಿಗಳಲ್ಲಿ ಯಥೇಚ್ಛವಾಗಿ ಹರಡಿರುತ್ತವೆ ಹಾಗಾಗಿ ಒಂದೇ ಜಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಉತ್ತಮ ಹಾಗೂ ನೀರನ್ನು ಕುಡಿಯುವುದರಿಂದ ಈ ಕಾಯಿಲೆ ಬರುವುದಿಲ್ಲ ಏಕೆಂದರೆ ನೀರು ಕಾಯಿಸಿದಾಗ ಅಂದರೆ ಕುದಿಸಿದಾಗ ಸೊಳ್ಳೆಯ ಮೊಟ್ಟೆಗಳು ಸತ್ತು ಹೋಗುತ್ತವೆ.

ಡೆಂಗ್ಯೂ ಜ್ವರ : ಡೆಂಗ್ಯೂ ಜ್ವರ ಎನ್ನುವುದು ಒಂದು ವೈರಸ್ ನಿಂದ ಸೃಷ್ಟಿ ಆಗುವಂತಹ ಕಾಯಿಲೆ ಡೆಂಗ್ಯೂ ವೈರಸ್ ಸೊಳ್ಳೆ ಅಲ್ಲೇ ಇದ್ದರೂ ಅದು ಮಾನವನ ದೇಹಕ್ಕೆ ಸೇರಿದಾಗ ಮತ್ತೊಂದು ಸೋಳ್ಳೇ ಆ ರಕ್ತವನ್ನು ಮಾನವನ ದೇಹದ ದಿಂದ ಹಿರಿ ಮತ್ತೆ ಅದೇ ವೈರನುವನ್ನು ದೇಹದಲ್ಲಿ ಹೆಚ್ಚಾಗಿ ಹರಡುವಂತೆ ಮಾಡುತ್ತದೆ, ಡೆಂಗ್ಯೂ ಜ್ವರ ಇರುವ ವ್ಯಕ್ತಿಗೆ ಕಚ್ಚಿದ ಸೊಳ್ಳೆ ಮತ್ತೊಬ್ಬ ವ್ಯಕ್ತಿಗೆ ಕಚ್ಚುವುದರಿಂದ ಆ ವ್ಯಕ್ತಿಯನ್ನು ಸಹ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳು : ಇನ್ನು ಡೆಂಗ್ಯೂ ಇರುವ ವ್ಯಕ್ತಿಯಲ್ಲಿ ತೀವ್ರವಾದ ತಲೆನೋವು ಜ್ವರ ಮೈಕೈ ನೋವು ಮಂಡಿಗಳ ನೋವು ಕಣ್ಣು ನೋವು ಅತಿಯಾದ ಆಯಾಸ ಚರ್ಮದ ಮೇಲೆ ಚಿಕ್ಕ ಚಿಕ್ಕ ಕೆಂಪು ಗುಳ್ಳೆಗಳು ಹೊಟ್ಟೆ ನೋವು ಸತತವಾಗಿ ವಾಂತಿ ದೇಹದ ಮತ್ತು ಮಾನಸಿಕ ಚಡಪಡಿಕೆ ಇರುತ್ತವೆ ಹಾಗಾಗಿ ಈ ಲಕ್ಷಣಗಳು ಕಂಡುಬಂದಲ್ಲಿ ಆದಷ್ಟು ಬೇಗ ಡಾಕ್ಟರ್ ಬಳಿ ಹೋಗಿ ತೋರಿಸಿಕೊಂಡು ಚಿಕಿತ್ಸೆ ಪಡೆಯುವುದು ಉತ್ತಮ.

Comments are closed.