ಕರಾವಳಿ

ಅಂಗಡಿ ಬಂದ್ ಮಾಡಲು ಬಂದವರಿಗೆ ಮೋದಿ ಅಭಿಮಾನಿಯಿಂದ ಸಖತ್ ಕ್ಲಾಸ್! (Video)

Pinterest LinkedIn Tumblr

ಕುಂದಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಭಾರತ ಬಂದ್‌ ಸಂದರ್ಭ ಅಂಗಡಿ ಬಂದ್‌ ಮಾಡಿಸಲು ಬಂದವರಿಗೆ ಮೋದಿ ಅಭಿಮಾನಿ ಕ್ಲಾಸ್ ತೆಗೆದುಕೊಂಡ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕುಂದಾಪುರ ತಾಲೂಕಿನ ಗುಜ್ಜಾಡಿಯ ನಾಯಕವಾಡಿಯ ಮೋಹನ್‌ ಮೊಗವೀರ ಅವರು ತಮ್ಮ ಪತಂಜಲಿ ಮಳಿಗೆಯನ್ನು ಬಂದ್ ದಿನವಾದ ನಿನ್ನೆ ತೆರೆದಿದ್ದರು. ಈ ಸಂದರ್ಭ ಸುಮಾರು 15 ಮಂದಿ ಆಗಮಿಸಿ ಬಂದ್‌ ಮಾಡುವಂತೆ ಆಗ್ರಹಿಸಿದರು. ಒಳ್ಳೆಯ ಪ್ರಧಾನಿಯ ವಿರುದ್ಧ ಪ್ರತಿಭಟಿಸುತ್ತೀರಾ? ದೇಶದ ಕುರಿತು ಚಿಂತಿಸಿದರೆ ಅದು ಮಾನವೀಯತೆ. ಪ್ರಧಾನಿ ಇಷ್ಟು ಸವಲತ್ತು ನೀಡಿದ್ದಾರೆ ಎಂದಿದ್ದಾರೆ. ಈ ವಿಡಿಯೋ ಜಾಲ ತಾಣದಲ್ಲಿ ವೈರಲ್‌ ಆಗಿ ಚರ್ಚೆಗೆ ಗ್ರಾಸವಾಗಿತ್ತು.

ಅನಂತರ ಶಬರಿಮಲೆ ವಿಚಾರ ಪ್ರಸ್ತಾಪ ಮಾಡಿದ ಮೋಹನ್‌ ಅವರು ಕಮ್ಯುನಿಷ್ಟರು ಸಾವಿರ ವರ್ಷದ ಇತಿಹಾಸ ಇರುವ ಶಬರಿಮಲೆಯ ಪಾವಿತ್ರ್ಯ ಕೆಡಿಸಿದಾಗ ನೀವು ಪ್ರತಿಭಟಿಸಲಿಲ್ಲ. ಇಂತಹ ಹಲವು ಸಂದರ್ಭಗಳಲ್ಲಿ ನೀವ್ಯಾರೂ ಮಾತನಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.