ಕರಾವಳಿ

ತಣ್ಣೀರಿನ ಸ್ನಾನ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದವರಿಗೆ ಒಳ್ಳೆದು ಯಾಕೆ?

Pinterest LinkedIn Tumblr

ಹೌದು ಮನುಷ್ಯನ ದೇಹಕ್ಕೆ ಬಿಸಿನೀರಿನ ಸ್ನಾನಕ್ಕಿಂತ ತಣ್ಣೀರಿನ ಸ್ನಾನ ಮಾಡುವುದು ತುಂಬ ಒಳಿತು ಮತ್ತು ತಣ್ಣೀರಿನ ಸ್ನಾನದಲ್ಲಿ ಅಡಗಿದೆ ಹಲವು ಲಾಭಗಳು, ಹಾಗಿದ್ರೆ ಬನ್ನಿ ತಣ್ಣೀರಿನ ಸ್ನಾನ ಮಾಡುವುದರಿಂದ ಆಗುವ ಲಾಭಗಳು ಯಾವ ಯಾವ ಅನ್ನೋದು ಇಲ್ಲಿದೆ ನೋಡಿ.

ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ : ಹೌದು ತಣ್ಣೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳ ವಿರುದ್ಧ ಹೊರಡುವ ವೈರಸ್ ಗಾಲ ಪ್ರಮಾಣ ಹೆಚ್ಚಾಗುತ್ತದೆ, ಹಾಗಾಗಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳಿತು.

ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದವರಿಗೆ : ಹೌದು ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದವರು ತಣ್ಣೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ, ಹಾಗಾಗಿ ತಣ್ಣೀರಿನ ಸ್ನಾನ ಒಳಿತು.

ದೇಹದ ತೂಕ ಕಡಿಮೆಮಾಡುತ್ತದೆ : ಸಾಮಾನ್ಯವಾಗಿ ದೇಹದ ತೂಕ ಇಳಿಸಲು ಹಲವು ರೀತಿಯ ತಾಲೀಮುಗಳು ಮತ್ತು ಕಸರತ್ತುಗಳನ್ನು ಮಾಡಲಾಗುತ್ತದೆ ಅದರ ಜೊತೆಗೆ ತಣ್ಣೀರಿನ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಖಂಡಿತವಾಗಿ ದೇಹದ ತೂಕ ನಿದಾನವಾಗಿ ಕಡಿಮೆಯಾಗುತ್ತದೆ.

ಹಾರ್ಮೋನಗಳಿಗೆ ಒಳಿತು : ಅಧ್ಯಯನದ ಪ್ರಕಾರ ಪುರುಷರಿಗೆ ಅಂಗಗಳ ಬೆಳವಣಿಗೆ ಮತ್ತು ಬಲವರ್ಧನೆಗೆ ತಣ್ಣೀರಿನ ಸ್ನಾನ ತುಂಬ ಸಹಕಾರಿಯಾಗಲಿದೆ.

ಬಂಜೆತನ ನಿವಾರಣೆಗೆ : ಹೆಚ್ಚಾಗಿ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಬಂಜೆತನ ಉಂಟಾಗುವ ಸಂಬವಿರುತ್ತದೆ, ಹಾಗಾಗಿ ತಣ್ಣೀರಿನ ಸ್ನಾನ ಮಾಡುವುದು ಒಳಿತು, ಹೆಚ್ಚಾಗಿ ಪುರುಷರ ವೃಷಣಕ್ಕೆ ಬಿಸಿನೀರು ಬೀಳುವುದರಿಂದ ವೀರ್ಯಾಣು ವೃದ್ಧಿಯಾಗುವುದಿಲ್ಲ ಹಾಗಾಗಿ ತಣ್ಣೀರಿನ ಸ್ನಾನ ಮಾಡುವುದು ಒಳಿತು.

Comments are closed.