ಉಡುಪಿ: ಉಡುಪಿ ಜಿಲ್ಲೆಯಲ್ಲಿ COTPA 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಉಡುಪಿ ತಾಲೂಕಿನ ಮಣಿಪಾಲ ನಗರದ ಡಿ.ಸಿ ಕಛೇರಿ ರಸ್ತೆ ಮತ್ತು ಮಣಿಪಾಲ End point ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೇಲ್ಗಳು, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6 (ಎ) ಮತ್ತು 6(ಬಿ) ಅಡಿಯಲ್ಲಿ 13 ಪ್ರಕರಣ ದಾಖಲಿಸಿ 3650 ರೂ. ದಂಡ ವಸೂಲಿ ಮಾಡಲಾಯಿತು. ಅದರಂತೆ ಸೆಕ್ಷನ್ 4, 6 (ಎ) ಮತ್ತು 6(ಬಿ) ನಾಮಫಲಕಗಳನ್ನು ಸದರಿ ದಾಳಿಯಲ್ಲಿ ವಿತರಿಸಲಾಯಿತು ಹಾಗೂ 35 ಅಂಗಡಿ, ಹೋಟೇಲ್ಗಳಲ್ಲಿ ಆಹಾರ ಸುರಕ್ಷತಾ ಪರವಾನಿಗೆಯನ್ನು ಪರೀಕ್ಷಿಸಲಾಯಿತು.

ದಾಳಿಯಲ್ಲಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಆನಂದ ಗೌಡ, ಆಹಾರ ಸುರಕ್ಷತಾ ಅಧಿಕಾರಿ, ವೆಂಕಟೇಶ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೃಷ್ಣಪ್ಪ, ರಾಷ್ಟೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ, ಎನ್.ಟಿ.ಸಿ.ಪಿ. ಸಮಾಜಕಾರ್ಯಕರ್ತೆ ಶೈಲಾ ಶಾಮನೂರು, ಮಣಿಪಾಲ ಪೋಲೀಸ್ ಠಾಣೆಯ ಆರಕ್ಷಕ ರೇವಣ ಸಿದ್ದಪ್ಪ ಎಮ್, ಮತ್ತು ವಾಹನ ಚಾಲಕ ಪ್ರಸಾದ್ ಉಪಸ್ಥಿತರಿದ್ದರು.
Comments are closed.