ಕರಾವಳಿ

ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಟೊಮ್ಯಾಟೋ ಒಂದು ವರದಾನ

Pinterest LinkedIn Tumblr

ನಾವು ದೇಹದ ತೂಕ ಹೆಚ್ಚಾಗಿ ಬೊಜ್ಜು ಹೆಚ್ಚಾಗುತ್ತಿದ್ದಂತೆ ತಲೆ ಬಿಸಿ ಮಾಡಿಕೊಳ್ಳುತ್ತೇವೆ, ಆದರೆ ಇದಕ್ಕೆ ನಾವು ಯಾವುದು ರಾಸಾಯನಿಕಗಳನ್ನ ಬಳಸದೆ ಸುಲಭವಾಗಿ ಮನೆಯಲ್ಲಿ ಸಿಗುವ ಟಮೊಟೊವನ್ನ ಬಳಸ ಬಹುದು, ಹೌದು ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಟೊಮ್ಯಾಟೋ ಒಂದು ವರದಾನವೇ ಸರಿ, ದೇಹದಲ್ಲಿ ಸೇರಿಕೊಂಡಿರುವ ಕೊಬ್ಬಿನಂತಹ ಪದಾರ್ಥಗಳನ್ನು ದೇಹದಿಂದ ಹೊರಹಾಕಲು ಇದು ಹೆಚ್ಚು ಸಹಕಾರಿಯಾಗಿದೆ.

ಟೊಮ್ಯಾಟೋ ಹಣ್ಣನ್ನು ಹಸಿಯಾಗಿ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಈರುಳ್ಳಿಯ ಜೊತೆಗೆ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ತೂಕ ಗಣನೀಯವಾಗಿ ಕಡಿಮೆಯಾಗುತ್ತದೆ.

ಟೊಮ್ಯಾಟೋ ಹಣ್ಣಿನ ರಸಕ್ಕೆ ಚಿಟಿಕೆ ಉಪ್ಪು ಮತ್ತು ಮೆಣಸಿನ ಕಾಳನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದಲ್ಲಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಟೊಮ್ಯಾಟೋ ಹಣ್ಣುಗಳಿಗೆ ಸ್ವಲ್ಪ ಉಪ್ಪು, ಸ್ವಲ್ಪ ಕರಿಮೆಣಸಿನ ಪುಡಿ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಲ್ಲಿ ಹೊಟ್ಟೆಯಲ್ಲಿ ಹುಳುಗಳಿದ್ದರೆ ಹೊರಹೋಗುತ್ತವೆ.

ಟೊಮ್ಯಾಟೋ ಅರೆದು ಮುಖಕ್ಕೆ ಲೇಪನ ಮಾಡಿ ಮೃದುವಾಗಿ ಮಾಲಿಶ್ ಮಾಡಬೇಕು, ಸ್ವಲ್ಪ ಹೊತ್ತಿನ ನಂತರ ತೊಳೆಯಬೇಕು, ಇದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗಿ ಚರ್ಮ ನುಣುಪಾಗುತ್ತದೆ, ಮಾತ್ರವಲ್ಲ ಕಾಂತಿಯುತವೂ ಆಗುತ್ತದೆ.

ಮೂಗಿನಲ್ಲಿ ರಕ್ತ ಸೋರುವ ಸಮಸ್ಯೆಗೆ ಮನೆ ಮದ್ದುಗಳು.
ಮೂಗಿನಿಂದ ಕೆಲವು ಬಾರಿ ರಕ್ತ ಶ್ರಮಿಸುವುದುಂಟು ಅದನ್ನು ಸಾಮಾನ್ಯ ಕಾಯಿಲೆ ಎಂದು ತಿಳಿದುಕೊಂಡು ಸುಮ್ಮನ್ ಆಗಬಾರದು ಮೂಗಿನಿಂದ ರಕ್ತಸ್ರಾವ ಕಾಯಿಲೆ ಕೆಲವು ಬಾರಿ ಗಂಭೀರ ಸಮಸ್ಯೆಯನ್ನು ತಂದೊಡ್ಡುವುದು ಇಂತಹ ಕಾಯಿಲೆಗೆ ಎಪಿಸ್ಟಾಕ್ಸೀಸ್ ಎಂದು ಕರೆಯುವರು.

ಆಯುರ್ವೇದ ಶಾಸ್ತ್ರದ ಪ್ರಕಾರ ರಕ್ತದ ಜೊತೆ ಸೇರಿಕೊಂಡು ಮೂಗಿನಲ್ಲಿ ರಕ್ತ ಸ್ರವಿಸುವುದು ಎಂದು ಹೇಳುವರು ಅದು ಕಪದ ಜೊತೆ ಬೆರೆತಾಗ ಮೂಗು ಅಥವಾ ಬಾಯಿಯಲ್ಲಿ ರಕ್ತದ ರೂಪದಲ್ಲಿ ಹೊರಬರುವುದು ಮೂಗನ್ನು ಬಹಳ ಸೂಕ್ಷ್ಮವಾಗಿ ಸ್ವಚ್ಛಗೊಳಿಸಬೇಕು ಕೈ ಬೆರಳುಗಳಲ್ಲಿ ಇರುವ ಉಗುರು ಹೊಳ್ಳೆಗಳಿಗೆ ತಗುಲಿದರೆ ಬಹಳ ಬೇಗ ಗಾಯವಾಗುವುದು.

ಮೂಗಿನಲ್ಲಿ ರಕ್ತ ಬರುವವರು ಬೇಸಿಗೆಯ ಕಾಲದಲ್ಲಿ ಸ್ವಲ್ಪ ಎಚ್ಚರದಿಂದ ಇರಬೇಕು ತಂಪಾದ ಪದಾರ್ಥಗಳನ್ನು ಸೇವಿಸಬೇಕು ತಾಜಾ ಹಣ್ಣುಗಳ ಸೇವನೆ ತುಂಬಾ ಮುಖ್ಯ ಗುಲ್ಕನ್ ತಿನ್ನುವುದರಿಂದ ಒಳ್ಳೆಯ ಫಲಿತಾಂಶ ದೊರಕುವುದು.

ಪ್ರತಿನಿತ್ಯ ಬೆಟ್ಟದ ನೆಲ್ಲಿ ಕಾಯಿಯ ಪುಡಿಯನ್ನು ಸೇವಿಸುವುದರಿಂದ ತುಂಬಾ ಒಳ್ಳೆಯದಾಗುವುದು.

ಹಸುವಿನ ತುಪ್ಪವನ್ನು ಪ್ರತಿದಿನವೂ ಮೂಗಿನ ಹೊಳ್ಳೆಗಳಿಗೆ ಒಂದೆರಡು ಹನಿ ಇಟ್ಟುಕೊಳ್ಳುವುದರಿಂದ ಮೂಗಿನಿಂದ ರಕ್ತ ಬರುವುದನ್ನು ತಪ್ಪಿಸಬಹುದು.

ದಾಳಿಂಬೆ ರಸವನ್ನು ಮೂಗಿನ ಹೊಳ್ಳೆಗಳಿಗೆ ಹಾಕಬೇಕು ಆಗ ರಕ್ತ ಸೋರುವ ಸಮಸ್ಯೆ ನಿವಾರಣೆಯಾಗುವುದು.

ಗಮನಿಸಿ : ಮೂಗು ತುಂಬಾ ಸೂಕ್ಷ್ಮವಾದ ಅಂಗ ಅದನ್ನು ಸ್ವಚ್ಛಗೊಳಿಸುವಾಗ ಹಾಗೂ ಅದರ ಕ್ಷೇಮವನ್ನು ನೋಡಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು.

Comments are closed.