ರಾಷ್ಟ್ರೀಯ

‘ನೀವು ಗಂಡಸರೇ ಆಗಿದ್ರೆ ಬಸ್​ ಟಚ್​ ಮಾಡಿ’; ಶಬರಿಮಲೆ ಪ್ರತಿಭಟನಾಕಾರರಿಗೆ ಅವಾಜ್ ಹಾಕಿದ ಪೊಲೀಸ್ ಅಧಿಕಾರಿ; ವಿಡಿಯೋ ವೈರಲ್!

Pinterest LinkedIn Tumblr

ಕನ್ಯಾಕುಮಾರಿ: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿರುವುದನ್ನು ಖಂಡಿಸಿ ಕೇರಳದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದ್ದು ಬಸ್ ತಡೆದ ಪ್ರತಿಭಟನಾಕಾರರಿಗೆ ಪೊಲೀಸ್ ಆವಾಜ್ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

https://www.facebook.com/abhijithpyd/videos/2248781911812512/?t=0

ತಮಿಳುನಾಡು-ಕೇರಳ ಗಡಿಯಲ್ಲಿರುವ ಕಲಿಯಕ್ಕವಿಲ್ಲೈನಲ್ಲಿ ಸಹ ಪ್ರತಿಭಟನೆಯ ಕಾವು ಜೋರಾಗಿತ್ತು. ಈ ವೇಳೆ ಪ್ರತಿಭಟನಕಾರರು ಬಸ್ ಅನ್ನು ತಡೆದ ಡ್ರೈವರ್ ಅನ್ನು ಕೆಳಗಿಳಿಯುವಂತೆ ಒತ್ತಾಯಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸಬ್ ಇನ್ಸ್ ಪೆಕ್ಟರ್ ಮೋಹನ್ ಅಯ್ಯರ್ ಪ್ರತಿಭಟನಕಾರರಿಗೆ ನೀವು ಗಂಡಸರೇ ಆಗಿದ್ರೆ ಬಸ್ ಅನ್ನು ಮುಟ್ಟಿ ಎಂದು ಆವಾಜ್ ಹಾಕಿದ್ದಾರೆ.

ಪೊಲೀಸ್ ರೋಷಾವೇಶ ಕಂಡ ಪ್ರತಿಭಟನಾಕಾರರ ಧೈರ್ಯವೆಲ್ಲ ಉಡುಗಿ ಹೋಗಿತ್ತು. ಅವರೆಲ್ಲ ಸ್ಥಳದಿಂದ ಕಾಲ್ಕಿತ್ತರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ಪೊಲೀಸ್ ಅಧಿಕಾರಿಯನ್ನು ನಿಜ ಜೀವನದ ಸಿಂಗಂ, ಸಿಂಬಾ ಎಂದು ಕೊಂಡಾಡಿದ್ದಾರೆ.

Comments are closed.