ರಾಷ್ಟ್ರೀಯ

ಪೋಷಕರ ವಿರೋಧ; ಕಾಲೇಜಿನ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

Pinterest LinkedIn Tumblr


ನವದೆಹಲಿ: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಕಾರಣ ಇಬ್ಬರು ಪ್ರೇಮಿಗಳು ಕಾಲೇಜಿನ ತರಗತಿಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.

12 ನೇ ತರಗತಿ ಓದುತ್ತಿದ್ದ ಪುಷ್ಪೇಂದ್ರ, 11 ನೇ ತರಗತಿ ಓದುತ್ತಿದ್ದ ಶಿವಾನಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಇಚ್ಚಿಸಿದ್ದರು. ಆದರೆ ಇವರ ಮದುವೆಗೆ ಹುಡುಗನ ಮನೆಯಲ್ಲಿ ವಿರೋಧವಿತ್ತು. ಬೇರೆ ಹುಡುಗಿಯ ಜೊತೆ ಮದುವೆ ಮಾಡಲು ಹುಡುಗನ ಪೋಷಕರು ನಿಶ್ಚಯಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾದ ಆತ ವಿಷಯವನ್ನು ತನ್ನ ಪ್ರೇಯಸಿಯೊಂದಿಗೆ ಹೇಳಿದ್ಧಾನೆ. ಪೋಷಕರನ್ನು ಎದುರಿಸಿ ಮದುವೆಯಾಗಲು ವಿಫಲರಾದ ಅವರು, ಸಾಯುವ ನಿರ್ಧಾರ ಮಾಡಿದ್ದಾರೆ.

ಶನಿವಾರ ಬೆಳಗ್ಗೆ ಕಾಲೇಜಿಗೆ ಬಂದ ಅವರು, ತರಗತಿಯಲ್ಲೇ ಸೀಲಿಂಗ್​ ಫ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ವಿಷಯ ತಿಳಿದ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.