ಕ್ರೀಡೆ

ವಿಕೆಟ್ ಕೀಪರ್ , ಬ್ಯಾಟ್ಸ್ ಮನ್ ರಿಷಭ್ ಪಂತ್ ರಿಷಭ್ ಪಂತ್ ಮತ್ತೊಬ್ಬ ಗಿಲ್ ಕ್ರಿಸ್ಟ್: ರಿಕಿ ಪಾಟಿಂಗ್

Pinterest LinkedIn Tumblr


ಸಿಡ್ನಿ : ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 159 ರನ್ ಗಳಿಸಿದ ಟೀಂ ಇಂಡಿಯಾ ವಿಕೆಟ್ ಕೀಪರ್ , ಬ್ಯಾಟ್ಸ್ ಮನ್ ರಿಷಭ್ ಪಂತ್ ಮತ್ತೊಬ್ಬ ಗಿಲ್ ಕ್ರಿಸ್ಟ್ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ ಶ್ಲಾಘಿಸಿದ್ದಾರೆ.
ರಿಷಭ್ ಪಂತ್ ನಿಜವಾಗಿಯೂ ಪ್ರತಿಭಾವಂತ ಆಟಗಾರ, ಗುಡ್ ಬಾಲ್ ಸ್ಟ್ರೈಕರ್ ಆಗಿದ್ದಾರೆ. ಉತ್ತಮ ಪಂದ್ಯವನ್ನು ಹೇಗೆ ಚೆನ್ನಾಗಿ ಆಡಬೇಕು ಎಂಬುದು ಅವರಿಗೆ ಗೂತ್ತಿದೆ. ದೆಹಲಿ ತಂಡದಲ್ಲಿರುವ ರಿಷಭ್ ಪಂತ್ ಗೆ ತರಬೇತುದಾರನಾಗಿ ಕೆಲಸ ಮಾಡುವುದು ತಮ್ಮ ಅದೃಷ್ಟ ಎಂದು ಅವರು ಹೇಳಿದ್ದಾರೆ. ರಿಕಿ ಪಾಟಿಂಗ್ ಐಪಿಎಲ್ 2019 ಆವೃತ್ತಿಯ ದೆಹಲಿ ತಂಡದ ಕೋಚ್ ಆಗಿದ್ದಾರೆ.
ಯಾವ ರೀತಿಯಲ್ಲಿ ಬ್ಯಾಟ್ ಮಾಡಬೇಕು ಎಂಬುದು ರಿಷಭ್ ಪಂತ್ ಗೆ ಗೊತ್ತಿದ್ದು, ಉತ್ತಮ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮುತ್ತಾರೆ. ವೀಕ್ಷಕ ವಿವರಣೆ ಕೊಠಡಿಯಲ್ಲಿ ರಿಷಭ್ ಪಂತ್ ಮತ್ತೊಬ್ಬ ಗಿಲ್ ಕ್ರಿಸ್ಟ್ ಎಂದು ಮಾತನಾಡಿರುವುದಾಗಿ ಪಾಟಿಂಗ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಗಿಲ್ ಕ್ರಿಸ್ಟ್ ಆಸ್ಟ್ರೇಲಿಯಾದ ಲಿಜೆಂಡರಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗುವ ಮೂಲಕ 96 ಟೆಸ್ಟ್ ಗಳಲ್ಲಿ 47.6 ಸರಾಸರಿಯಲ್ಲಿ 5,570 ರನ್ ಗಳಿಸಿದ್ದಾರೆ. 287 ಏಕದಿನ ಪಂದ್ಯಗಳಲ್ಲಿ 35.89 ರ ಸರಾಸರಿಯಲ್ಲಿ 9. 619 ರನ್ ಗಳಿಸಿದ್ದಾರೆ.
ಮಹೇಂದ್ರ ಸಿಂಗ್ ಟೀಂ ಇಂಡಿಯಾದಲ್ಲಿ ತನ್ನದೇ ಆದ ಪ್ರಭಾವ ಬೀರಿದ್ದು, ಅನೇಕ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೂ ಟೆಸ್ಟ್ ಪಂದ್ಯಗಳಲ್ಲಿ ಕೇವಲ ಆರು ಶತಕ ಗಳಿಸಿದ್ದಾರೆ. ಆದರೆ, ರಿಷಭ್ ಪಂತ್ ದೋನಿಗಿಂತಲೂ ಹೆಚ್ಚಿನ ಶತಕಗಳನ್ನು ದಾಖಲಿಸಿದ್ದಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ರಿಕಿ ಪಾಟಿಂಗ್ ಹೇಳಿದ್ದಾರೆ.
ಗಿಲ್ ಕ್ರಿಸ್ಟ್ ಕೂಡಾ ರಿಷಭ್ ಪಂತ್ ಕಟ್ಟಿದ ಉತ್ತಮ ಇನ್ನಿಂಗ್ಸ್ ಗೆ ಪಿಧಾ ಆಗಿರುವುದಾಗಿ ಹೇಳಿಕೊಂಡಿದ್ದಾರೆ.

Comments are closed.