ಕರಾವಳಿ

ವಿವೇಕ್ ನಿಗೂಢ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆಯಾಗಲಿ, ಪರಿಹಾರ ಸಿಗಲಿ: ಕೋಟ ಆಗ್ರಹ

Pinterest LinkedIn Tumblr

ಕುಂದಾಪುರ: ಉಘ್ರ ಸಂಘಟನೆಯಿಂದ ತನಗೆ ಬೆದರಿಕೆಯಿದೆ, ಮನೆಯವರಿಗೂ ಸಮಸ್ಯೆಯಾಗಲಿದೆ ಅದಕ್ಕಾಗಿ ತಾನೇ ಸಾಯುವೆ ಎಂದು ಡೆತ್‌ನೋಟ್‌ ಬರೆದಿಟ್ಟು ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ಕುಂದಾಪುರ ಕೋಟೇಶ್ವರ ನಿವಾಸಿ ವಿವೇಕ್ ಮೊಗವೀರ ಮನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೋಟ, ತರುಣ ವಿವೇಖ ಮೊಗವೀರ ಬರೆದ ಡೆತ್‌ನೋಟ್‌ ನಲ್ಲಿ ತನಗಾದ ಅಷ್ಟು ಸಮಸ್ಯೆ ಹಾಗೂ ದೇಶದ ಬಗೆಗಿನ ಕಾಳಜಿ ವ್ಯಕ್ತವಾಗಿದೆ. ಮಾದಕ ವಸ್ತು ಸರಬರಾಜು, ದೇವಸ್ಥಾನ ದರೋಡೆ, ಕೋಮು ಭಾವನೆ ಕೆರಳಿಸುವ ಸಂಘಟನೆಯ ಬಗ್ಗೆ ಆ ಪತ್ರದಲ್ಲಿ ಉಲ್ಲೇಖವಿದೆ. ನಿರಂತರವಾಗಿ ಬೆದರಿಕೆ ಕರೆ ಬಂದ ಹಿನ್ನೆಲೆ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತ ಬರೆದಿದ್ದು ಈ ಬಗ್ಗೆ ಸರಕಾರ, ಉಡುಪಿ ಎಸ್ಪಿ ಹಾಗೂ ಗ್ರಹ ಇಲಾಖೆ ವಿವಿಧ ಆಯಾಮಗಳಲ್ಲಿ ಸಮಗ್ರ ತನಿಖೆ ನಡೆಸಬೇಕಿದೆ. ಆತ ಉಲ್ಲೇಖಿಸಿದ ಸಂಸ್ಥೆ ಹಾಗೂ ವ್ಯಕ್ತಿಯ ಬಗ್ಗೆಯೂ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಪರಿಹಾರ ಸಿಗಬೇಕು…
ಮೇಲ್ನೋಟಕ್ಕೆ ಆತನ ಆತ್ಮಹತ್ಯೆಗೆ ಪ್ರಚೋದನೆ ಕಾರಣವೆಂಬುದು ತಿಳಿಯುತ್ತಿದೆ. ಸಮಾಜ ಕಂಟಕ ವಿಚಾರದ ಬಗ್ಗೆ ಆತ ಮಾಹಿತಿ ನೀಡಿದ್ದು ಕಾನೂನು ಚೌಕಟ್ಟಿನಲ್ಲಿ ಕೂಲಂಕುಷ ತನಿಖೆ ಬಗ್ಗೆ ಕೂಡಲೇ ಗ್ರಹಮಂತ್ರಿಗಳಿಗೆ, ಸರಕಾರಕ್ಕೆ ಪತ್ರ ಬರೆಯಲಿದ್ದು ಬಡ ಕುಟುಂಬಕ್ಕೆ ಪರಿಹಾರ ಒದಗಿಸುವ ಬಗ್ಗೆಯೂ ವಿನಂತಿಸುವೆ.

ಉನ್ನತಾಧಿಕಾರಿಗಳ ತನಿಖೆಯಾಗಲಿ..
ಆತನ ಡೆತ್ ನೋಟ್, ಆತನ ಸ್ನೇಹಿತರು ಹೇಳುವಂತೆ ಸಜ್ಜನ ಯುವಕನಾಗಿ ಕಂಡುಬರುತ್ತಿದ್ದು ಉದ್ದೇಶಪೂರ್ವಕವಾಗಿ ಆರೋಪ ಮಾಡಿಲ್ಲ ಎಂಬುದು ಕಂಡುಬಂದಿದೆ. ಆತ ಬರೆದ ಪತ್ರದಲ್ಲಿಯೂ ದೇಶದ ಕಾಳಜಿ ಎದ್ದು ಕಾಣುತ್ತಿದ್ದು ಈ ಬಗ್ಗೆ ಸರಕಾರ ಗಂಭೀರತೆ ವಹಿಸಬೇಕು. ಉನ್ನತ ತನಿಖಾಧಿಕರಿಗಳ ತಂಡ ರಚಿಸಬೇಕು. ಒಂದೊಮ್ಮೆ ಸರಕಾರ ಇದರಲ್ಲಿ ಹಿಂದೇಟು ಹಾಕಿದರೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿಯೆತ್ತುವುದಾಗಿ ಹೇಳಿದರು.

ಈ ಸಂದರ್ಭ ಬಿಜೆಪಿಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೇಟ್ಟಿ, ತಾ.ಪಂ ಸದಸ್ಯೆ ರೂಪಾ ಪೈ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಹಿಂದೂ ಸಂಘಟನೆಯ ಅಶೋಕ್ ಕಾಗೇರಿ ಮೊದಲಾದವರಿದ್ದರು.

(ವರದಿ-ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ: ಆತ್ಮಹತ್ಯೆಗೂ ಮೊದಲು ಯುವಕ ಬರೆದ ಡೆತ್‌ನೋಟ್‌ನಲ್ಲಿದೆ ಬೆಚ್ಚಿಬೀಳಿಸುವ ಸಂಗತಿಗಳು

Comments are closed.