ಕರಾವಳಿ

ಬೈಂದೂರು; ಸಿಎಂ ಸಾಧನ ಸಮಾವೇಶಕ್ಕೆ ಕೊಲ್ಲೂರು ಊಟವೆಂಬ ಆರೋಪ: ‘ಊಟ ಎಲ್ಲಿಂದ ಬಂದ್ರೂ ಊಟ’ ಅಂದ್ರು ಸಿಎಂ!

Pinterest LinkedIn Tumblr

ಕುಂದಾಪುರ: ‘ಕಲ್ಲಡ್ಕ ಅಂದರೇನು? ಕಲ್ಲಡ್ಕ ಶಾಲೆಗಳಿಗೆ ಯಾಕೆ ಊಟ ಕೊಡಬೇಕು? ಅದು ಸರ್ಕಾರಿ ಶಾಲೆಗಳಲ್ಲ, ಅನುದಾನಿತ ಶಾಲೆಗಳು ಅಲ್ಲ. ಇವು ಖಾಸಗಿ ಶಾಲೆಗಳಾಗಿದ್ದು, ಅಲ್ಲಿಗೆ ಯಾಕೆ ಸರ್ಕಾರ ಊಟ ನೀಡಬೇಕು, ಅದರ ಬದಲು ಬೇರೆ ಶಾಲೆಗೆ ಕೊಡಬಹುದಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಕುಂದಾಪುರದ ಬೈಂದೂರಿನಲ್ಲಿ ನಡೆದ ಸಮಾವೇಶಕ್ಕೆ ಕೊಲ್ಲೂರು ದೇವಳದಿಂದ ಊಟ ಸರಬರಾಜು ಮಾಡಲಾಗುತ್ತಿದೆ ಎಂಬ ವಿಚಾರದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಮಾಧ್ಯಮಕ್ಕೆ ಈ ಪ್ರತಿಕ್ರಿಯೆ ನೀಡಿದರು. ಒಂದೆಡೆ ಕಾರ್ಯಕ್ರಮಕ್ಕೆ ಊಟ ನೀಡುವ ವಿಚಾರ, ಅದಕ್ಕೆ ಲಿಂಕ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಶಾಲೆಗಳಿಗೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಊಟ ವ್ಯವಸ್ಥೆ ನಿಲ್ಲಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿ ಈ ರೀತಿಯಾಗಿ ನೀಡಿದ್ದಾರೆ. ಅಲ್ಲದೇ ಸಾಧನಾ ಸಮಾವೇಶಕ್ಕೆ ಊಟ ಪೂರೈಕೆ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಊಟ ಎಲ್ಲಿಂದ ಪೂರೈಕೆ ಆಗುತ್ತಿದೆ ಎಂಬುವುದು ಗೊತ್ತಿಲ್ಲ. ಊಟ ಎಲ್ಲಿಂದ ಬಂದರು ಊಟ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊಲ್ಲೂರಿನಿಂದ ಅಡುಗೆಯನ್ನು ವಾಹನಕ್ಕೆ ಲೋಡ್ ಮಾಡುವುದು ಮತ್ತು ಲಾರಿ ಸಮಾವೇಶಕ್ಕೆ ತೆರಳುವುದನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲ ತಾಣಗಳಿಗೆ ವೈರಲ್ ಮಾಡಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ಶೇರ್‍ ಆಗುತ್ತಿದ್ದು ಆಕ್ರೋಷವೂ ಕೂಡ ವ್ಯಕ್ತವಾಗುತ್ತಿದೆ.

Comments are closed.