ರಾಷ್ಟ್ರೀಯ

ಹೆತ್ತ ತಾಯಿಯನ್ನೇ ಟೆರೇಸ್ ನಿಂದ ಕೆಳಗೆ ತಳ್ಳಿ ಹತ್ಯೆ ಮಾಡಿದ ಮಗ ! ಈ ವೀಡಿಯೊ ನೋಡಿ….

Pinterest LinkedIn Tumblr

https://youtu.be/nTh1bELkb4w

ರಾಜ್ ಕೋಟ್: ತನ್ನ ವೃದ್ದ ತಾಯಿಯನ್ನು ಕಾಲೇಜು ಪ್ರೊಫೆಸರ್ ಒಬ್ಬರು ಮನೆಯ ಟೆರೇಸ್ ನಿಂದ ತಳ್ಳಿ ಹತ್ಯೆ ಮಾಡಿದ ಘಟನೆ ಗುಜರಾತಿನ ರಾಜ್ ಕೋಟ್ ನಲ್ಲಿ ನಡೆದಿದೆ.

ಫಾರ್ಮಸಿ ಕಾಲೇಜಿನ ಪ್ರೊಫೆಸರ್ ಸಂದೀಪ್ ನಾಥ್ವಾನಿ ಈ ಕೃತ್ಯವೆಸಗಿದ್ದು ತಾಯಿ ಜಯಶ್ರೀ ಬೆನ್ (64) ಅವರನ್ನು ಕಳೆದ ವರ್ಷ ಸಪ್ಟೆಂಬರ್ ತಿಂಗಳಿನಲ್ಲಿ ತನ್ನ ಮನೆಯ ಟೆರೇಸ್ ಮೇಲಿನಿಂದ ತಳ್ಳಿ ಸಾಯಿಸಿದ್ದನೆಂದು ಪೋಲೀಸರು ಹೇಳಿದ್ದಾರೆ.

ಆರಂಭದಲ್ಲಿ, ನಾಥ್ವಾನಿ ಕುಟುಂಬವು ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ ಜಯಶ್ರೀ ಬೆನ್ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದರು. ಇದರಿಂದಲೇ ಆಕೆ ಟೆರೇಸ್ ಮೇಲಿನಿಂದ ತಾವಾಗಿ ಬಿದ್ದು ಸತ್ತಿದ್ದಾರೆ ಎಂದು ಹೇಳಿಕೆ ನೀಡಿತ್ತು. ಅದಾಗಿಯೂ ಪೋಲೀಸರು ಇನ್ನೊಂದು ದಿಕ್ಕಿನಿಂದ ತನಿಖೆ ಕೈಗೊಂಡಿದ್ದು, ನಾವು ಅಪಾರ್ಟ್ ಮೆಂಟ್ ನಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದು ಆ ಸಿಸಿಟಿವಿ ದೃಶ್ಯಗಳಲ್ಲಿ ಸಂದೀಪ್ ತನ್ನ ತಾಯಿ ಜಯಶ್ರೀ ಬೆನ್ ಅವರೊಡನೆ ಮನೆಯ ಟೆರೇಸ್ ಗೆ ಬಂದಿದ್ದದ್ದು ಸ್ಪಷ್ಟವಾಗಿ ದಾಖಲಾಗಿದೆ. ಅಲ್ಲದೆ ನಾವು ಆ ದೃಶ್ಯಗಳ ಮುಂದಿಟ್ಟು ಸಂದೀಪ್ ನ್ನು ಪ್ರಶ್ನಿಸಲು ತಾನು ತನ್ನ ತಾಯಿಯ ಅನಾರೋಗ್ಯಕ್ಕೆ ಬೇಸತ್ತಿದ್ದು ಆ ದಿನ ಟೆರೇಸ್ ಗೆ ಕರೆದೊಯ್ದು ಜಯಶ್ರೀ ಬೆನ್ ಅವರನ್ನು ತಳ್ಲಿದ್ದಾಗಿ ಒಪ್ಪಿದ್ದಾರೆ” ಸೆಕೆಂಡ್ ಝೋನ್ ಡಿಜಿಪಿ ಕರಣ್ ರಾಜ್ ವಾಘೇಲಾ ಹೇಳಿದರು.

ಇದೀಗ ಪೋಲೀಸರು ನಾಥ್ವಾನಿ ಅಪರಾಧಿ ಎನ್ನುವುದನ್ನು ಪತ್ತೆ ಹಚ್ಚಿದ್ದು ಸದ್ಯ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ಇದಾಗಲೇ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿಉ ಲಭ್ಯವಾಗಿದೆ.

Comments are closed.