
ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿ ಜೆಕೆ ಹಾಗೂ ಶೃತಿ ತುಂಬಾ ಅನ್ಯೋನ್ಯವಾಗಿದ್ದಾರೆ. ಇವರಿಬ್ಬರದ್ದು ಸ್ನೇಹವೋ ಅಥವಾ ಅದನ್ನು ಮೀರಿದ್ದೋ ಎನ್ನುವ ವಿಚಾರ ಮಾತ್ರ ಇದುವರೆಗೂ ಸ್ಪಷ್ಟವಾಗಿಲ್ಲ.
ಪ್ರತಿ ದಿನ ಜೆಕೆಯವರನ್ನು ಅಂಟಿಕೊಂಡೆ ಇರುತ್ತಾರೆ ಶೃತಿ. ಎಲ್ಲಿ ಹೋದ್ರು ಅವನ ಹಿಂದೆಯೇ ಇರುತ್ತಾರೆ. ಜೆಕೆ ಕೂಡ ಇದರ ಹೊರತಾಗಿಲ್ಲ. ಆತನು ಅಷ್ಟೇ ತನ್ನ ಹೆಚ್ಚಿನ ಸಮಯವನ್ನು ಶೃತಿ ಜತೆ ಕಳೆಯುತ್ತಾರೆ. ಇತ್ತೀಚೆಗಂತೂ ಇದು ಸ್ವಲ್ಪ ಜಾಸ್ತಿ ಆದಂತೆ ಕಾಣಿಸುತ್ತಿದೆ.
ಈ ನಡುವೆ ಶೃತಿ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋದ ಮೇಲೆ ತನ್ನನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರಾ ಎನ್ನುವ ಯೋಚನೆ ಕೂಡ ಜೆಕೆ ಮೈಂಡ್‌ನಲ್ಲಿ ಹುಟ್ಟಿಕೊಂಡಿದೆ. ನಿನ್ನೆಯ ಎಪಿಸೋಡಿನಲ್ಲಿ ಅದನ್ನು ಶೃತಿ ಎದುರೇ ಹೇಳಿಕೊಂಡರು. ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕೆಂದು ಶೃತಿಗೂ ತೋಚಲಿಲ್ಲ.
ಇನ್ನು ನಿನ್ನೆಯ ಎಪಿಸೋಡಿನಲ್ಲಿ ಇಂಟ್ರೆಸ್ಟಿಂಗ್ ಸಂಗತಿಯೊಂದು ನಡೆಯಿತು. ಬೆಡ್ ಮೇಲೆ ಕುಳಿತು ಜಡೆ ಹಾಕಿಕೊಳ್ಳಲು ಪ್ರಯಾಸ ಪಡುತ್ತಿದ್ದಳು ಶೃತಿ. ಇದನ್ನು ನೋಡಿ ತುಂಟ ನಗೆ ಬೀರಿದ ಜೆಕೆ, ಅವರ ಜಡೆ ಹಾಕಲು ಮುಂದಾದನು. ನಗು ನಗುತ್ತಲೇ ಶೃತಿಗೆ ಜಡೆ ಹಾಕಿದ್ರು ಜೆಕೆ. ಬಹುಶಃ ಸ್ನೇಹದ ಪರಾಕಾಷ್ಟೆ ಅಂದ್ರೆ ಇದೆ ಇರಬಹುದು.
Comments are closed.