ಕರಾವಳಿ

ಕಾಟಿಪಳ್ಳ ದೀಪಕ್ ರಾವ್ ಮರ್ಡರ್ ಕೇಸ್: ಕುಂದಾಪುರದಲ್ಲಿ ಹೆದ್ದಾರಿ ತಡೆದು ಪ್ರೊಟೆಸ್ಟ್

Pinterest LinkedIn Tumblr

ಕುಂದಾಪುರ: ಕಾಟಿಪಳ್ಳದ ದೀಪಕ್‌ ರಾವ್‌ ಕೊಲೆಯನ್ನು ವಿರೋಧಿಸಿ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಜ. 5 ರಂದು ಶುಕ್ರವಾರ ಮಧ್ಯಾಹ್ನದಂದು ಹಿಂದೂ ಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ 66ನ್ನು ತಡೆದ ಪ್ರತಿಭಟನಾಕಾರರು ಮತೀಯ ಸಂಘಟನೆಗಲ ವಿರುದ್ಧ ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿಶ್ವ ಹಿಂದೂ ಪರಿಷತ್, ಆಎ.ಎಸ್.ಎಸ್., ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.

  

ಈ ಸಂದರ್ಭ ಮುಖಂಡರಾದ ಸುಬ್ರಮಣ್ಯ ಹೊಳ್ಳ, ಕಾಡೂರು ಸುರೇಶ್ ಶೆಟ್ಟಿ, ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಪ್ರದೀಪ್ ಸಂಗಮ್, ಭಾಸ್ಕರ್ ಬಿಲ್ಲವ, ಸುರೇಂದ್ರ ಮಾರ್ಕೋಡು, ಗಿರೀಶ್ ಕುಂದಾಪುರ, ರಾಘವೇಂದ್ರ, ಸದಾನಂದ ಬಳ್ಕೂರು, ಸತೀಶ್ ಪೂಜಾರಿ ವಕ್ವಾಡಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಹೆದ್ದಾರಿ ತಡೆದ ಕಾರಣ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

ವರದಿ- ಯೋಗೀಶ್ ಕುಂಭಾಸಿ

Comments are closed.