ಪ್ರಮುಖ ವರದಿಗಳು

ಸ್ನಾನಕ್ಕೆ ಹೋದವಳು ಪ್ರಿಯಕರನಿಗೆ ಕಳುಹಿಸಿದಳು ಸೆಲ್ಫೀ: ಮುಂದೆ ಆದದ್ದೇ ಬೇರೆ…! ಇಲ್ಲಿದೆ ವೀಡಿಯೊ ….

Pinterest LinkedIn Tumblr

https://youtu.be/ZrmCZFyEvHk

‘ಸಂಬಂಧಗಳಲ್ಲಿ ಪ್ರೀತಿ ಇರುತ್ತೋ ಇಲ್ಲವೋ ಆದರೆ ರೊಮ್ಯಾನ್ಸ್ ಮಾತ್ರ ಇದ್ದೇ ಇರುತ್ತದೆ’ ಇಂತಹುದೇ ಮನಸ್ಥಿತಿ ಇತ್ತೀಚಿನ ಸಂಬಂಧಗಳಲ್ಲಿ ಕಂಡು ಬರುತ್ತದೆ. ಕಾಲ ಬದಲಾಗಿದೆ ಜನರು ಪತ್ರಗಳನ್ನು ಬಿಟ್ಟು ಮೊಬೈಲ್ ಹಾಗೂ ಮೊಬೈಲ್ ತೊರೆದು ಇಂಟರ್’ನೆಟ್ ಮೂಲಕ ಮಾತುಕತೆ ನಡೆಸುತ್ತಿದ್ದಾರೆ. ಇದರೊಂದಿಗೆ ಜನರಲ್ಲಿ ಪ್ರೀತಿಯ ಕುರಿತಾದ ಕಲ್ಪನೆಯೂ ಬದಲಾಗಿದೆ.

ಇನ್ನು ಇಂಟರ್’ನೆಟ್ ಮಹಿಮೆ ಅದೆಷ್ಟಿದೆ ಎಂದರೆ ದಿನಕ್ಕೆ ಕನಿಷ್ಟ ಪಕ್ಷ ಎರಡು ಫೋಟೋಗಳನ್ನು ಶೇರ್ ಮಾಡಿಲ್ಲವೆಂದಾದರೆ ದಿನವೇ ಪೂರ್ಣಗೊಳ್ಳುವುದಿಲ್ಲ. ಇನ್ನು ಸೆಲ್ಫೀ ಕ್ರೇಜ್ ಹುಟ್ಟಿದ ಬಳಿಕವಂತೂ ಬಾಯ್ ಫ್ರೆಂಡ್/ ಗರ್ಲ್ ಫ್ರೆಂಡ್ ಫೋಟೋ ಕಳಿಸು ಎಂದ ಮರುಕ್ಷಣವೇ ಕಳಿಸಬೇಕಾಗುತ್ತದೆ. ಇಲ್ಲವೆಂದಾದಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಜಗಳವಾಡುತ್ತಾರೆ. ರಿಲೇಷ್ಶಿಪ್ ಆರಂಭವಾದಾಗ ಸೆಲ್ಫೀ ಕಳುಹಿಸಲು ಹಿಂದೇಟು ಹಾಕಿದರೂ ದಿನಗಳೆದಂತೆ ಫೋಟೋ ಕಳುಹಿಸವುದು ಸಾಮಾನ್ಯವಾಗುತ್ತದೆ. ಹುಡುಗಿಯರಂತೂ ಮುಂದೇನಾಗಬಹುದು ಎಂಬುವುದನ್ನು ಯೋಚಿಸದೆ ಕೇಳಿದ ಫೋಟೋಗಳನ್ನು ಕಳುಹಿಸುತ್ತಿರುತ್ತಾರೆ.

ಆದರೆ ಹೀಗೆ ಮುಂದಾಲೋಚನೆ ಮಾಡದೆ ಫೋಟೋ ಕಳುಹಿಸುವವರಲ್ಲಿ ಜಾಗೃತಿ ಮೂಡಿಸಲೆಂದೇ ವಿಡಿಯೋವೊಂದನ್ನು ಬಿಡುಗಡೆಗೊಳಿಸಲಾಗಿದ್ದು, ಬಹುಶಃ ಇದನ್ನು ನೋಡಿದ ಬಳಿಕವಾದರೂ ಫೋಟೋ ಕಳುಹಿಸುವ ಮೊದಲು ಕೊಂಚ ಯೋಚಿಸುವ ಸಾಧ್ಯತೆಗಳಿವೆ.

Comments are closed.