ಕರಾವಳಿ

ಮನೆಗೆ ನುಗ್ಗಿ ತಂಡದಿಂದ ಹಲ್ಲೆ : ಗಾಯಾಳುವನ್ನು ಮಾರ್ಗ ಮಧ್ಯೆ ಇಳಿಸಿದ ಪೊಲೀಸರ ವಿರುದ್ಧ ಪ್ರತಿಭಟನೆ

Pinterest LinkedIn Tumblr

———————————–

ಮಂಗಳೂರು, ಫೆಬ್ರವರಿ.7: ತಣ್ಣೀರುಬಾವಿ ಸಮೀಪದ ಬೆಂಗರೆಯಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯೊಂದಕ್ಕೆ ನುಗ್ಗಿದ ತಂಡವೊಂದು ನಾಲ್ಕು ಮಂದಿಗೆ ಹಲ್ಲೆಗೈದ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಇದೇ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಪೊಲೀಸರು ಕೈಚೆಲ್ಲಿದ ಕಾರಣ ಗಾಯಾಳು ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದ ಘಟನೆ ಕೂಡ ನಡೆಯಿತು.

ಬೆಂಗ್ರೆಯ ಮಹಮ್ಮೂದ್, ಫಮೀನಾ ದಂಪತಿ ಹಾಗೂ ಮಕ್ಕಳಾದ ಸಲ್ಮಾನ್ ಫಾರಿಶ್, ಸಮ್ನಾನ ಎಂಬವರಿಗೆ ಈ ತಂಡ ಮಾರಾಣಾಂತಿಕ ಹಲ್ಲೆಗೈದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಣ್ಣೀರುಬಾವಿ ಸಮೀಪದ ಬೆಂಗರೆಯಲ್ಲಿ ಜಾಗದ ವಿಚಾರವಾಗಿ ಸ್ಥಳೀಯರಾದ ಅನ್ವರ್ ಹುಸೈನ್, ಮುಮ್ತಾಝ್, ಶಮೀಮಾ, ಹಂಝ ಎಂಬವರು ಮಹಮ್ಮೂದ್ ಮನೆಗೆ ನುಗ್ಗಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಮನೆಯಲ್ಲಿದ್ದ ಪತ್ನಿ ಫಮೀನಾ ಹಾಗೂ ಮಕ್ಕಳಾದ ಸಲ್ಮಾನ್ ಫಾರಿಷ್ ಹಾಗೂ ಶಮ್ಮಾನ್ ಗೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದವರನ್ನು ಸ್ಥಳೀಯರ ನೆರವಿನಿಂದ ಪೊಲೀಸರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಕೂಡಾ ಕೂಳೂರು ಬಳಿ ಈ ನಾಲ್ಕು ಮಂದಿಯನ್ನು ಕೆಳಗಿಳಿಸಿದ ಪೊಲೀಸರು ನಮಗೆ ತುರ್ತು ಕೆಲಸವಿದೆ ರಿಕ್ಷಾದಲ್ಲಿ ಆಸ್ಪತ್ರೆಗೆ ಹೋಗಿ ಎಂದು ಹೇಳಿದರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಇದನ್ನು ತೀವ್ರವಾಗಿ ಖಂಡಿಸಿದ ಮಹಮ್ಮೂದ್ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಫ್ ಎ ಸ್ಥಳೀಯ ಮುಖಂಡ ನೌಶಾದ್, ಜಿಲ್ಲಾ ಮುಖಂಡ ಬಿ.ಕೆ ಇಮ್ತಿಯಾಝ್ ಮತ್ತಿತರರು ಮಹಮ್ಮೂದ್ ಅವರನ್ನು ಮನವೊಲಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರ ಈ ಕೃತ್ಯವನ್ನು ಡಿವೈಎಫ್ ಐ ಖಂಡಿಸಿದೆ.

Comments are closed.