ಕರಾವಳಿ

ಕಲಾ ಪೋಷಕ ಜೋನ್ ಎ.ಸಿಕ್ವೇರಾ ಸಾಕಿನಾಕ ನಿಧನ

Pinterest LinkedIn Tumblr

ಮುಂಬಯಿ, ಫೆ.07: ಉಪನಗರ ಸಾಕಿನಾಕ ಇಲ್ಲಿನ ಹೆಸರಾಂತ ಉದ್ಯಮಿ, ಕಲಾ ಪೋಷಕ, ಕೊಂಕಣ್ ಕಲಾಕಾರ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ಜೋನ್ ಎವ್ಜೀನ್ ಸಿಕ್ವೇರಾ (56) ಅವರು ಸೋಮವಾರ (06/02/17) ರಂದು ಸಾಕಿನಾಕ ನಹಾರ್ ಇಲ್ಲಿನ ಮಂಗೋಲಾ ಅಪಾರ್ಟ್‌ಮೆಂಟ್‌ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಕಳೆದ ಶನಿವಾರವಷ್ಟೇ ಕೊಂಕಣ್ ಪಬ್ಲಿಕೇಶನ್ ಮುಂಬಯಿ ಅಂಧೇರಿ ಪೂರ್ವದ ಮರೋಲ್ ವಿಜಯನಗರದಲ್ಲಿನ ಪಲ್ಲೊಟ್ಟಿ ಚರ್ಚ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೋನ್ ಸಿಕ್ವೇರಾ ಮತ್ತು ಅರ್ಸುಲಾ ಜೆ.ಸಿಕ್ವೇರಾ ದಂಪತಿಯ ಸಾಮಾಜಿಕ, ಕಲಾ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಿತ್ತು.

ಕೊಂಕಣ್ ಕಲಾಕಾರ್ ಸಂಸ್ಥೆಯ ಮುಖೇನ ಅನೇಕನೇಕ ಕಲಾವಿದರನ್ನು ಬೆಂಬಲಿಸಿ ಜೋನ್ ವಾರ್ಷಿಕವಾಗಿ `ಪಿಂತಾಮ್ ಕೊಂಕಣ್ ಕಲಾಕಾರ್ ಪ್ರಶಸ್ತಿ’ ಪ್ರದಾನಿಸಿ ಕಲಾಕಾರರನ್ನು ಗೌರವಿಸಿ ಪ್ರೋತ್ಸಾಹಿಸುತ್ತಿದ್ದರು.

ಮಂಗಳೂರು ಮೂಲ್ಕಿ ಅಲ್ಲಿನ ಪಕ್ಷಿಕೆರೆಯ ಮೂಲದವರಾಗಿದ್ದ ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಜೋನ್ ಸಿಕ್ವೇರಾ ಪಾರ್ಥೀವ ಶರೀರವನ್ನು ಮಂಗಳವಾರ ಊರಿಗೆ ರವಾನಿಸಲಾಗಿದ್ದು ಮೃತರ ಅಂತ್ಯಕ್ರಿಯೆ ಗುರುವಾರ (09.02.17) ಪಕ್ಷಿಕೆರೆ ಸೈಂಟ್ ಜೂಡ್ ಚರ್ಚ್‌ನಲ್ಲಿ ಸಂಜೆ ನೇರವೇರಿರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

By :Rons Bantwal

Comments are closed.