ಕರಾವಳಿ

ಇಬ್ಬರು ಕಳ್ಳರ ಸೆರೆ : 2.87 ಲಕ್ಷ ರೂ.ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು : ನಗರದ ಖಾಸಗಿ ಕಚೇರಿಯೊಂದರಿಂದ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದ ಆರೋಪಿ ಗಳಿಬ್ಬರನ್ನು ಬಂಧಿಸಿರುವ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ 2,87,500ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಅಸ್ಸಾಂ ಮೂಲದ ರಜನೀ ಕಲಿಟಾ (22) ಹಾಗೂ ಶಿವಶಂಕರ್ ದಾಸ್ @ ಅಶೋಕ್ ಕಬೀರ್ (23) ಎಂದು ಗುರುತಿಸಲಾಗಿದೆ. ಕಳವಾದ ಸೊತ್ತು ಮತ್ತು ಕಳ್ಳತನ ಇಬ್ಬರು ಆರೋಪಿಗಳನ್ನು ನಗರದ ಕಂಕನಾಡಿ ರೈಲ್ವೇ ನಿಲ್ದಾಣದ ಬಳಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಇತ್ತೀಚಿಗೆ ಶಕ್ತಿನಗರದ ಪ್ರೀತಿನಗರದಲ್ಲಿರುವ ಮಂಗಳೂರು ಹಿಲ್ಸ್ ಇಂಟರ್ ನೆಟ್ ಸಿಟಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಕಛೇರಿಯಿಂದ 4 ಲ್ಯಾಪ್ ಟಾಪ್, 5 ಐ ಪ್ಯಾಡ್, 1 ಕ್ಯಾಮೆರಾ, 1 ವಾಚ್, ಲ್ಯಾಪ್ ಟಾಪ್ ಮೌಸ್ ಹಾಗೂ ಚಾರ್ಜರ್ಗಳನ್ನು ಕಳವುಗೈದಿದ್ದರು.

ಇದೀಗ ಕಳವು ಮಾಡಲಾಗಿದ್ದ ಒಟ್ಟು 2,87,500/- ರೂ. ಗಳ ಸೊತ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಕ್ಕೆ ಒಪ್ಪಿಸಲಾಗಿದೆ.

ಕಂಕನಾಡಿ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ರವಿ ನಾಯ್ಕ್ ರವರ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಪಿ.ಎಸ್.ಐ ಶಂಕರ್ ಪಾಟಾಳಿ, ಎ.ಎಸ್.ಐ ಗಿಲ್ಬಟ್, ವಿನೋದ್, ಮದನ್, ಸಂತೋಷ್, ರಘವೀರ್, ಸತೀಶ್, ಹೆಚ್.ಜಿ ನಿತೇಶ್ ಸಹಕರಿಸಿರುತ್ತಾರೆ.

Comments are closed.