ಕರಾವಳಿ

ಸಣ್ಣ ತುಂಡು ಕಟ್ಟಿಗೆಯಿಂದ ಹೆಚ್ಚಿನ ಅಡುಗೆ ತಯಾರಿಸಲು ಸಹಕಾರಿಯಾದ ‘ಕಟ್ಟಿಗೆ ಸ್ಟವ್’!

Pinterest LinkedIn Tumblr

ಕುಂದಾಪುರ: ವಾಣಿಜ್ಯ ಸಿಲಿಂಡರ್ ಪೂರೈಕೆ ಅಭಾವದಿಂದ ಎಲ್ಲೆಡೆ ಹೋಟೆಲ್, ಹಾಲ್, ಕ್ಯಾಂಟಿನ್‌ಗಳಿಗೆ ಅಡುಗೆ ತಯಾರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಕೆಲವೊಂದು ಹೋಟೆಲ್ ಮಾಲಕರು ಕೆಲ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ಕುಂದಾಪುರದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲದ ಇತಿಹಾಸವಿರುವ ಪಾರಿಜಾತ ಹೋಟೆಲ್ ನಲ್ಲಿ ಕೊಯಮತ್ತೂರಿನಿಂದ ಕಟ್ಟಿಗೆ ಸ್ಟವ್ (ವುಡ್ ಸ್ಟವ್) ವೊಂದನ್ನು ತರಿಸಿದ್ದಾರೆ. ಈ ಕಟ್ಟಿಗೆ ಸ್ಟವ್ ಗೆ ಹೆಚ್ಚಿನ ಕಟ್ಟಿಗೆ ಏನು ಬೇಕಾಗಿಲ್ಲ. ಕೇವಲ ಸಣ್ಣ ಒಂದು ತುಂಡು ಕಟ್ಟಿಗೆಯಿದ್ದರೆ ಸಾಕು ಒಂದಷ್ಟು ಆಹಾರ ತಯಾರಿಕೆ ಸಾಧ್ಯ. ಅಂದರೆ ಕಡಿಮೆ ಕಟ್ಟಿಗೆಯಲ್ಲಿ ಹೆಚ್ಚಿನ ಆಹಾರ ತಯಾರಿಸಲು ಈ ಕಟ್ಟಿಗೆ ಸ್ಟವ್ ಸಹಕಾರಿಯಾಗಿದೆ. ವಿದ್ಯುತ್ ಸಂಪರ್ಕವು ಬೆಂಕಿ ನಿಯಂತ್ರಿಸುವ ಕಾರಣ ಸಣ್ಣ ತುಂಡು ಕಟ್ಟಿಗೆ ಸಾಕಾಗುತ್ತದೆ.

ಇದನ್ನು ಕೊಯಮತ್ತೂರಿನಿಂದ ಸುಮಾರು 35 ಸಾವಿರ ರೂ. ಕೊಟ್ಟು ತರಿಸಲಾಗಿದ್ದು, ನಮಗೆ ಇಲ್ಲಿ ತಿಂಡಿ ಮಾಡಲು, ಮಿಕ್ಸರ್ ನಂತಹ ತಿಂಡಿಗಳನ್ನು ತಯಾರಿಸಲು ಹೆಚ್ಚಿನ ಗ್ಯಾಸ್ ಬೇಕಾಗುತ್ತದೆ. ಸಾಂಬಾರ್ ತಯಾರಿಗೂ ಗ್ಯಾಸ್‌ನ ಅಗತ್ಯವಿದೆ. ಅದಕ್ಕಾಗಿ ಈ ಕಟ್ಟಿಗೆ ಸ್ಟವ್ ಅನ್ನು ತರಿಸಿದ್ದೇವೆ. ತಕ್ಕಮಟ್ಟಿಗೆ ಇದರಿಂದ ಪ್ರಯೋಜನವಾಗುತ್ತಿದೆ. ಇದಕ್ಕೆ ವಿದ್ಯುತ್ ಸಂಪರ್ಕವಿರುವುದರಿಂದ ಬೆಂಕಿ ಜಾಸ್ತಿ ಉರಿಯಲು ಅನುಕೂಲವಾಗುತ್ತದೆ. ಕಡಿಮೆ ಮಾಡಲು ಸಹ ಅವಕಾಶವಿದೆ ಎನ್ನುತ್ತಾರೆ ಪಾರಿಜಾತ ಹೋಟೆಲ್ ಮಾಲಕರಾದ ಗಣೇಶ್ ಭಟ್.

Comments are closed.