ಗಲ್ಫ್

ದುಬೈಯಲ್ಲಿ ಭಾರಿ ಬಿರುಗಾಳಿಗೆ ಕಾರುಗಳ ಮೇಲೆ ಬಿದ್ದ ಕ್ರೇನ್; ಸಂಪೂರ್ಣ ನಜ್ಜುಗುಜ್ಜಾದ ನಾಲ್ಕು ಕಾರುಗಳು-2 ಕಾರು ಬೆಂಕಿಗಾಹುತಿ

Pinterest LinkedIn Tumblr

https://youtu.be/0BMPGd3loz4

ದುಬೈಯಲ್ಲಿ ಹವಾಮಾನ ವೈರುತ್ಯದಿಂದ ಉಂಟಾದ ಭಾರಿ ಬಿರುಗಾಳಿಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಕ್ರೇನ್ ಒಂದು ಕೆಳಗೆ ಬಿದ್ದು ನಾಲ್ಕು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎರಡು ಕಾರುಗಳು ಬೆಂಕಿಗಾಹುತಿಯಾಗಿದೆ.

ದುಬೈಯ ಶೇಖ್ ಜಹೀದ್ ರಸ್ತೆಯ ಸಮೀಪ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಮೇಲಿದ್ದ ಕ್ರೇನ್ ಶುಕ್ರವಾರ ಬಾರಿ ಬಿರುಗಾಳಿಗೆ ಕೆಳಗೆ ಬಿದ್ದಿದೆ. ಈ ವೇಳೆ ಕಟ್ಟಡದ ಕೆಳಗಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅದರಲ್ಲಿ ಎರಡು ಕಾರು ಬೆಂಕಿಯಿಂದ ಸುಟ್ಟುಹೋಗಿದೆ. ಈ ವೇಳೆ ಕಾರಿನಲ್ಲಿದ್ದ ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇಯಲ್ಲಿ ಮರಳು ಬಿರುಗಾಳಿ, ಮಳೆಗೆ ಹಲವೆಡೆ ಸಣ್ಣಪುಟ್ಟ ಘಟನೆಗಳು ಸಂಭವಿಸಿದೆ. ಕ್ರೇನ್ ದುರಂತದ ವೇಳೆ ಅದರ ಪಕ್ಕದಲ್ಲೇ ಸಂಚರಿಸುತ್ತಿದ್ದ ಮೆಟ್ರೋ ರೈಲಿನ ಹಳಿ ಮೇಲೆ ಒಮ್ಮೆಗೆ ಬೆಂಕಿ ಕೆನ್ನಾಲೆ ಕಾಣಿಸಿಕೊಂಡ ಪರಿಣಾಮ ಮೆಟ್ರೋ ರೈಲನ್ನೂ ಕೆಲವೊತ್ತು ಸ್ಥಗಿತಗೊಳಿಸಲಾಯಿತು.

Comments are closed.