ಕ್ರೀಡೆ

ಭಾರತದ ಸ್ಪಿನ್‌ ದಾಳಿ ಎದುರಿಸುವುದು ಸುಲಭವಲ್ಲ; ಆಸ್ಟ್ರೇಲಿಯಾಗೆ ಪೀಟರ್ಸನ್‌

Pinterest LinkedIn Tumblr


ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಸ್ಪಿನ್‌ ದಾಳಿ ಎದುರಿಸುವುದು ಸುಲಭದ ಮಾತಲ್ಲ. ಸ್ಪಿನ್‌ ವಿರುದ್ಧ ಎಚ್ಚರಿಕೆ ಆಟವಾಡಿ, ಇಲ್ಲದಿದ್ದರೆ ಭಾರತ ಪ್ರವಾಸ ಕೈಬಿಡಿ ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಕೆವಿನ್‌ ಪೀಟರ್ಸನ್‌ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಸ್ಟ್ರೇಲಿಯ ಕ್ರಿಕೆಟಿಗರಿಗೆ ಕಿವಿಮಾತು ಹೇಳಿದ್ದಾರೆ.

ಭಾರತದ ವಿರುದ್ಧ ಇದೇ 23ರಿಂದ ಆರಂಭವಾಗಲಿರುವ ಟೆಸ್ಟ್‌ ಪಂದ್ಯಗಳನ್ನು ಆಡಲು ಆಸ್ಟ್ರೇಲಿಯ ತಂಡವು ಭಾರತಕ್ಕೆ ಆಗಮಿಸಲಿದೆ.

ಸ್ಪಿನ್‌ ಪಿಚ್‌ಗಳಲ್ಲಿ ಬ್ಯಾಟ್‌ ಮಾಡುವುದು ಸವಾಲಿನ ಕೆಲಸವಾಗಿದೆ. ಅಭ್ಯಾಸ ಪಂದ್ಯಗಳಲ್ಲಿ ಭಾರತದ ಸ್ಪಿನ್‌ ದಾಳಿಯನ್ನು ಅರಿತುಕೊಳ್ಳಬೇಕು ಮತ್ತು ನೆಟ್‌ನಲ್ಲಿ ಹೆಚ್ಚು ಸಮಯ ಕಳೆಯಬೇಕು. ಬ್ಯಾಟಿಂಗ್‌ ಮಾಡಲು ಸೂಕ್ತ ಲೈನ್‌ ಆಯ್ದುಕೊಳ್ಳುವುದು ಮುಖ್ಯ ಎಂದು ಆಸ್ಟ್ರೇಲಿಯನ್ನರಿಗೆ ಪೀಟರ್ಸನ್‌ ಹೇಳಿದ್ದಾರೆ.

2004ರಿಂದ ದಕ್ಷಿಣ ಏಷಿಯಾ ರಾಷ್ಟ್ರಗಳ ವಿರುದ್ಧ ಆಸ್ಟ್ರೇಲಿಯ ಪ್ರದರ್ಶನ ಕಳಪೆಯಾಗಿದೆ. 20 ಟೆಸ್ಟ್‌ ಪಂದ್ಯಗಳಲ್ಲಿ ಕೇವಲ 3 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 0–3 ಅಂತರದಿಂದ ಸರಣಿ ಕೈಚೆಲ್ಲಿತ್ತು.

Comments are closed.