ಗಲ್ಫ್

ದುಬೈ ಸೇರಿದಂತೆ ಯುಎಇಯಲ್ಲಿ ಭಾರಿ ಮರಳು ಬಿರುಗಾಳಿ, ಮಳೆ, ಹಿಮಪಾತ; ಜನ ಜೀವನ ಅಸ್ತವ್ಯಸ್ತ

Pinterest LinkedIn Tumblr

ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇಯಲ್ಲಿ ಮರಳು ಬಿರುಗಾಳಿ, ಮಳೆ, ಹಿಮಪಾತದ ಜೊತೆಗೆ ಜೋರಾಗಿ ಮಳೆ ಕೂಡ ಬಿದ್ದಿದೆ. ಜೊತೆಗೆ ಜೋರಾಗಿ ಚಳಿಗಾಳಿ ಬೀಸುತ್ತಿರುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.

ಗುರುವಾರ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣವಿತ್ತು. ಹವಾಮಾನ ವೈರುತ್ಯದಿಂದ ಶುಕ್ರವಾರ ಬೆಳಗ್ಗೆಯಿಂದ ಭಾರಿ ಮರಳು ಬಿರುಗಾಳಿ, ಮಳೆ, ಹಿಮಪಾತದ ಜೊತೆಗೆ ಜೋರಾಗಿ ಮಳೆ ಕೂಡ ಬಿದ್ದಿದೆ. ದುಬೈ, ಅಬುಧಾಬಿ, ಶಾರ್ಜಾ, ಅಜ್ಮಾನ್ ನಲ್ಲಿ ಮಳೆಯ ಜೊತೆಗೆ ಮರಳಿನ ಬಿರುಗಾಳಿ ಬೀಸಿದರೆ, ರಾಸಲ್ ಖೈಮದಲ್ಲಿ ಹಿಮಪಾತವಾಗಿದೆ. ಅಲ್ಲಲ್ಲಿ ಮಂಜಿನ ಮಳೆಯಾಗಿದೆ. ಚಳಿ ಕೂಡ ಹೆಚ್ಚಿದ್ದು, ಜನ ಇದರಿಂದ ಬಹಳಷ್ಟು ತೊಂದರೆಯನ್ನು ಅನುಭವಿಸ ಬೇಕಾಯಿತು.

ಯುಎಇ ಆಡಳಿತ ಈ ಬಗ್ಗೆ ವಾಹನ ಚಾಲಕರಿಗೆ ಹಾಗು ಇಲ್ಲಿನ ನಿವಾಸಿಗಳಿಗೆ ಮುನ್ಸೂಚನೆಯನ್ನು ನೀಡಿದೆ. ಹವಾಮಾನ ವೈಪರೀತ್ಯದಿಂದಾಗಿ ಈ ರೀತಿಯ ವಾತಾವರಣ ಉಂಟಾಗಿದ್ದು, ಜನ ಎಚ್ಚರಿಕೆಯನ್ನು ವಹಿಸುವಂತೆ ಸೂಚನೆಯನ್ನು ನೀಡಲಾಗಿದೆ.

Comments are closed.