ಗಲ್ಫ್

ದುಬೈಗರನ್ನು ರಂಜಿಸಿದ ಗಮ್ಮತ್ ಕಲಾವಿದರ ‘ತೆಲಿಕೆದ ಬರ್ಸಲು’

Pinterest LinkedIn Tumblr

Photo: Ashok Belman

ದುಬೈ : ದುಬೈಯ ‘ಗಮ್ಮತ್ ಕಲಾವಿದೆರ್’ ತಂಡದ ಕಲಾವಿದರು ಆಯೋಜಿಸಿದ್ದ ‘ತೆಲಿಕೆದ ಬರ್ಸಲು’ ಸಾಂಸರಿಕ ಹಾಸ್ಯಮಯ ತುಳು ನಾಟಕ ಬಹಳ ಸೊಗಸಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ದುಬೈಯ ಶೇಕ್ ರಾಶಿದ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ನಾಟಕದಲ್ಲಿ ಸ್ಥಳೀಯ ಕಲಾವಿದರೇ ನಟಿಸಿ, ನಿರ್ದೇಶಿಸಿದ್ದು, ನಾಟಕಕ್ಕೆ ಇನ್ನಷ್ಟು ಮೆರುಗು ತಂದುಕೊಟ್ಟಿತು. ‘ಗಮ್ಮತ್ ಕಲಾವಿದೆರ್’ ತಂಡ ಪ್ರತಿ ವರ್ಷ ತುಳು ನಾಟಕವನ್ನು ನಡೆಸುತ್ತ ಬಂದಿದ್ದು, ವಿಭಿನ್ನ ನಾಟಕಗಳನ್ನು ಆಡಿತೋರಿಸುವ ಮೂಲಕ ಗಲ್ಫ್ ರಾಷ್ಟ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ನಾಟಕದ ಕಥೆ, ಸಂಭಾಷಣೆ ಹಾಗು ಗೀತಾ ರಚನೆಯನ್ನು ಕರಾವಳಿಯ ತುಳುರಂಗ ಭೂಮಿಯ ದಿಗ್ಗಜ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಬರೆದಿದ್ದು, ವಿಶ್ವನಾಥ್ ಶೆಟ್ಟಿ ದುಬೈ ನಿರ್ದೇಶಿಸಿದ್ದು, ಗುರು ಬಾಯರ್ ಸಂಗೀತ ನೀಡಿದ್ದರು. ದುಬೈಯ ಸ್ಥಳೀಯ ಕಲಾವಿದರು ನಾಟಕಕ್ಕೆ ಜೀವ ತುಂಬಿದರು. ಕಲಾವಿದರ ನಟನೆ, ಪಾತ್ರ, ಹಾಸ್ಯದ ತುಣುಕು ಒಟ್ಟಾರೆ ನಾಟಕವನ್ನು ಪ್ರೇಕ್ಷಕರು ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿತು.

  

 

ನಾಟಕಕ್ಕೂ ಮೊದಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಫಾರ್ಚ್ಯೂನ್ ಗ್ರೂಪ್ ಆಫ್ ಹೊಟೇಲ್ಸ್’ನ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಹರೀಶ್ ಬಂಗೇರ, ಲತಾ ಹರೀಶ್ ಬಂಗೇರ, ಜೋಸೆಫ್ ಮಾತಾಯೆಸ್, ಜೆರಿ ಲೋಬೊ, ಫ್ರಾಂಕ್ ಫೆರ್ನಾಂಡಿಸ್, ಸರ್ವೋತ್ತಮ ಶೆಟ್ಟಿ, ಪ್ರವೀಣ್ ಭಟ್, ಸುವರ್ಣ ಸತೀಶ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದೇವಿದಾಸ್ ಕಾಪಿಕಾಡ್ ಹಾಗು ಅವರ ಧರ್ಮಪತ್ನಿ ಶ್ರಮಿಳ ಕಾಪಿಕಾಡ್, ಗುರು ಬಾಯಾರ್, ಸಂಪತ್ ಶೆಟ್ಟಿ ಹಾಗು ಅವರ ಧರ್ಮಪತ್ನಿ ಸುರೇಖಾ, ನಿತಿನ್ ಕುಮಾರ್ ಹಾಗು ಅವರ ಧರ್ಮಪತ್ನಿ ಶಾಂತಿ ನಿತಿನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್  ನಿರ್ಮಾಣದ ಬಹು ನಿರೀಕ್ಷಿತ ಕನ್ನಡ ಸಿನೆಮಾ ‘ಮಾರ್ಚ್ 22’ನ ಮೇಕಿಂಗ್ ವೀಡಿಯೊವನ್ನು ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು.

ನಾಟಕಕ್ಕೂ ಮೊದಲು ಹರೀಶ್ ಶೇರಿಗಾರ್ ತಮ್ಮ ಸುಮಧುರ ಕಂಠದ ಮೂಲಕ ಎಲ್ಲರನ್ನು ರಂಜಿಸಿದರು. ಕಾರ್ಯಕ್ರಮ ನಿರೂಪಣೆ ಸಂಪತ್ ಶೆಟ್ಟಿ, ರಾಜೇಶ್ ಕುತ್ತಾರ್ ನಡೆಸಿಕೊಟ್ಟರು.

Comments are closed.