ಕರಾವಳಿ

ಮಂಗಳೂರು ವಿಮಾನ ನಿಲ್ದಾಣ : ಲಕ್ಷಾಂತರ ಮೌಲ್ಯದ ವಿದೇಶಿ ಕರೆನ್ಸಿ ಸಹಿತಾ ಓರ್ವನ ಸೆರೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.4: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ವಿದೇಶಿ ಕರೆನ್ಸಿಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ ಅಕಾರಿಗಳು ಆರೋಪಿಯಿಂದ 35,02,900 ರೂ. ವೌಲ್ಯದ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿ ಅಬ್ದುರ್ ರುಬ್(21) ಬಂಧಿತ ಆರೋಪಿ.

ಇಮಿಗ್ರೇಶನ್ ಕೌಂಟರ್ನಲ್ಲಿ ತಪಾಸಣೆ ಮುಗಿದು ಜೆಟ್ ಏರ್ವೇಸ್ ಮೂಲಕ ದುಬೈಗೆ ಪ್ರಯಾಣಿಸಲು ಸಿದ್ಧತೆಯಲ್ಲಿದ್ದಾಗ ಆರೋಪಿಯ ಕೈಯ್ಯಲ್ಲಿದ್ದ ಬ್ಯಾಗ್ ಪರಿಶೀಲಿಸಿದಾಗ ಚಹಾ ಹುಡಿಯ ಪ್ಯಾಕೆಟ್ನಲ್ಲಿ ಪ್ಯಾಕ್ ಮಾಡಿದ್ದ ವಿದೇಶಿ ಕರೆನ್ಸಿ ಪತ್ತೆಯಾಗಿದೆ.

ಯುಎಸ್ ಡಾಲರ್, ಸೌದಿ ರಿಯಾಲ್, ಯುಎಇ ದಿರ್ಹಮ್ ಮತ್ತು ಆಸ್ಟ್ರೇಲಿಯಾ ಡಾಲರ್ಸ್ ಸೇರಿ ಒಟ್ಟು 35,02,900 ರೂ. ವೌಲ್ಯದ ಕರೆನ್ಸಿ ವಶಪಡಿಸಿಕೊಂಡಿದ್ದಾರೆ ಎಂದು ಡಿಆರ್‌ಐ ಉಪನಿರ್ದೇಶಕ ವಿನಾಯಕ ಭಟ್ ತಿಳಿಸಿದ್ದಾರೆ.

Comments are closed.